ಸಿಎಂಗೂ ತಟ್ಟಿದ ಚುನಾವಣಾ ಬಿಸಿ|ದೊಡ್ಡಬಳ್ಳಾಪುರದಲ್ಲಿ ಬೊಮ್ಮಾಯಿ ಕಾರ್ ತಡೆದ ಅಧಿಕಾರಿಗಳು!

Samagra news: ಚುನಾವಣಾ ಬಿಸಿ ಸಿಎಂಗೂ ತಟ್ಟಿದ್ದು, ದೊಡ್ಡಬಳ್ಳಾಪುರ (Doddaballapur) ದಲ್ಲಿ ಅಧಿಕಾರಿಗಳು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಕಾರು ತಡೆದು ತಪಾಸಣೆ ನಡೆಸಿದ್ದಾರೆ.

Ad Widget ... ..

ಸಿಎಂ ಪುತ್ರನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿಎಂ ಇಂದು ಘಾಟಿ ಸುಬ್ರಮಣ್ಯ ದೇವಾಲಯ (Ghati Subramanya Temple) ಕ್ಕೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಬಳಿಯ ಹೊಸಹುಡ್ಯ ಚೆಕ್ ಪೋಸ್ಟ್ ಬಳಿ ಚುನಾವಣಾಧಿಕಾರಿಗಳು ಕಾರು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ.

Ad Widget

ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಿರುವ ಹಿನ್ನೆಲೆ ಚೆಕ್ ಪೋಸ್ಟ್ ನಲ್ಲಿ ಸಿಎಂ ಕಾರು (Basavaraj Bommai car) ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಎಸ್ ಎಸ್ ಟಿ ಸ್ಥಳದಲ್ಲಿ ಹಾಜರಿದ್ದರು.

Leave a Comment

Your email address will not be published. Required fields are marked *