Ad Widget .

ಉಡುಪಿ: ಅಮಲೇರಿ ಹೆದ್ದಾರಿಯಲ್ಲಿ ಮಲಗಿದ್ದಾತನ ಉಪಚರಿಸಿ ಮಾನವೀಯತೆ ಮೆರೆದ‌ ಡಿಸಿ, ಎಸ್ಪಿ

ಸಮಗ್ರ ನ್ಯೂಸ್: ಮದ್ಯಪಾನ ಮಾಡಿ ರಾ. ಹೆ. 66ರಲ್ಲಿ ಮಲಗಿದ್ದ ವ್ಯಕ್ತಿಯೋರ್ವನನ್ನು ಎಬ್ಬಿಸಿ, ಉಪಚರಿಸುವ ಮೂಲಕ ಉಡುಪಿ ಡಿಸಿ ಮತ್ತು ಎಸ್‌ಪಿ ಮಾನವೀಯತೆ ಮೆರೆದಿದ್ದಾರೆ.

Ad Widget . Ad Widget .

ಉಡುಪಿ ಡಿಸಿ ಕೂರ್ಮಾ ರಾವ್‌ ಮತ್ತು ಎಸ್‌ಪಿ ಹಾಕೆ ಅಕ್ಷಯ್‌ ಮಚ್ಚೀಂದ್ರ ತಮ್ಮ ವಾಹನಗಳಲ್ಲಿ ಉಡುಪಿಯಿಂದ ಹೆಜಮಾಡಿ ಕಡೆಗೆ ತೆರಳುತ್ತಿದ್ದ ವೇಳೆ ಎರ್ಮಾಳು ಬಳಿ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬ ಮಲಗಿದ್ದನ್ನು ಗಮನಿಸಿದ್ದರು.

Ad Widget . Ad Widget .

ವಾಹನ ನಿಲ್ಲಿಸಿ ಆತನ ಬಳಿಗೆ ಬಂದ ಅವರು ಎಬ್ಬಿಸಿ ಅಂಗರಕ್ಷಕ ಸಿಬಂದಿ ಮತ್ತು ಸ್ಥಳೀಯರ ಸಹಕಾರದೊಂದಿಗೆ ರಸ್ತೆ ಬದಿಗೆ ಕರೆ ತಂದು ಉಪಚರಿಸಿದರು. ಬಳಿಕ ಹೈವೇ ಪೆಟ್ರೋಲ್‌ ಪೊಲೀಸರ ಮೂಲಕ ಆತನ ಮನೆಯವರನ್ನು ಸಂಪರ್ಕಿಸಿ, ಕರೆದೊಯ್ಯುವ ವ್ಯವಸ್ಥೆ ಮಾಡಿದರು. ಈ ಮಾನವೀಯ ನಡೆ ಪ್ರಶಂಸೆಗೆ ಪಾತ್ರವಾಗಿದೆ.

Leave a Comment

Your email address will not be published. Required fields are marked *