ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಐವರ್ನಾಡು(ivarnadu) ಗ್ರಾಮದಲ್ಲಿರುವ ಸೇತುವೆ ನಿರ್ಮಿಸಲು 35 ವರ್ಷದಿಂದ ಬೇಡಿಕೊಳ್ಳುತ್ತಿದ್ದರು ಜನಪ್ರತಿನಿಧಿಗಳು ಯಾವುದೆ ಸ್ಪಂದನೆ ನೀಡದ ಹಿನ್ನಲೆ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಐವರ್ನಾಡು ಗ್ರಾಮದ ಬಿರ್ಮುಕಜೆ,ಚಲ್ಲತ್ತಡಿ, ಸಾರಕೆರೆಗೆ ಹಾದು ಹೋಗುವ ರಸ್ತೆಯಲ್ಲಿರುವ ಐವರ್ನಾಡು ಗ್ರಾಮದ ಬಿರ್ಮುಕಜೆ,ಚಲ್ಲತ್ತಡಿ, ಸಾರಕೆರೆಗೆ ಹಾದು ಹೋಗುವ ರಸ್ತೆಯಲ್ಲಿರುವ ಚಲ್ಲತ್ತಡಿ ಎಂಬಲ್ಲಿ ಸೇತುವೆ ನಿರ್ಮಾಣದ ಬಗ್ಗೆ ಕಳೆದ 35 ವರ್ಷದಿಂದ ಸಾಕಷ್ಟು ಬೇಡಿಕೊಳ್ಳುತ್ತಿದ್ದರು. ಆದರು ಯಾವುದೇ ಸ್ಪಂದನೆ ಕೊಡದೆ ಊರಿನ ಜನತೆಯ ಸಂಕಷ್ಟಗಳಿಗೂ ನಮಗೂ ಯಾವುದೇ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವ ರಾಜಕೀಯ ನಾಯಕರು ಹಾಗೂ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ನಾವು ಮುಂಬರುವ ಚುನಾವಣೆಗೆ ಮತದಾನ ಬಹಿಷ್ಕರಿಸುವುದಾಗಿ ಶಪತಗೈದಿದ್ದೇವೆ. ಎಂದು ಗ್ರಾಮಸ್ಥರು ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಸಿದ್ದಾರೆ.