Ad Widget .

ನೀತಿಸಂಹಿತೆ ಹಿನ್ನಲೆ; ಗೃಹಸಚಿವರ ಕಾರು ವಶಕ್ಕೆ ಪಡೆದ ಚುನಾವಣೆ ಆಯೋಗ

ಸಮಗ್ರ ನ್ಯೂಸ್ : ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರ ಸರ್ಕಾರಿ ಕಾರನ್ನ ವಶಪಡಿಸಿಕೊಂಡ ಸುದ್ದಿ ಹರಿದಾಡಿತು. ಇದರ ಜೊತೆಗೆ ಗೃಹ ಸಚಿವರ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ.

Ad Widget . Ad Widget .

ಅರಳಸುರಳಿಯಲ್ಲಿ ಕಾರ್ಯಕರ್ತನ ಆರೋಗ್ಯ ವಿಚಾರಿಸಲು ಆರಗದಿಂದ ಹೊರಟಿದ್ದ ಗೃಹಸಚಿವ ಜ್ಞಾನೇಂದ್ರ ಕಾರ್ಯಕರ್ತನ ಆರೋಗ್ಯ ವಿಚಾರಿಸಿ ತೂದೂರು ಕಾರ್ಯಕ್ರಮಕ್ಕೆ ತೆರಳಬೇಕಿತ್ತು.

Ad Widget . Ad Widget .

ತೂದೂರಿನ ಕಾಕನಗದ್ದೆ ಕೋದಂಡ ಸ್ವಾಮಿ ದೇವಸ್ಥಾನಕ್ಕೆ ಬರುವ ವೇಳೆ ಚುನಾವಣೆ ನೀತಿ ಜಾರಿಯಾಗಿತ್ತು. ದೇವಸ್ಥಾನದ ಬಳಿ ಗೃಹಸಚಿವರು ಸರ್ಕಾರಿ ಕಾರನ್ನು ಬಿಟ್ಟು ತಮ್ಮ ಖಾಸಗಿ ಕಾರಿನಲ್ಲಿ ತೆರಳಿದ್ದರು.

ಚುನಾವಣೆ ನೀತಿ ಜಾರಿ ಹಿನ್ನಲೆಯಲ್ಲಿ ಎಂಪಿ, ಶಾಸಕರ ಸರ್ಕಾರಿ ಕಾರುಗಳು ಹಾಗೂ ಕಚೇರಿಗಳು ಸಹ ಚುನಾವಣೆ ಆಯೋಗ 24 ಗಂಟೆಯಲ್ಲಿ ವಶಕ್ಕೆ ಪಡೆಯಲಿದೆ. ಮುಂದಿನ 42 ದಿನಗಳ ವರೆಗೆ ಇವೆಲ್ಲವೂ ಆಯೋಗದ ವಶದಲ್ಲಿರುತ್ತದೆ.

Leave a Comment

Your email address will not be published. Required fields are marked *