ಸಮಗ್ರ ನ್ಯೂಸ್: ಯುಪಿಐ ಆಧಾರಿತ ವ್ಯವಹಾರಗಳಿಗೆ ವಿಧಿಸಲಾಗಿದೆ ಎನ್ನಲಾದ ಇಂಟರ್‌ಚೇಂಜ್ ಶುಲ್ಕಗಳ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಸ್ಪಷ್ಟೀಕರಣ ನೀಡಿದೆ.
ಈ ಶುಲ್ಕಗಳು ಪ್ರಿಪೇಯ್ಡ್ ಪಾವತಿ ವ್ಯವಹಾರ (ಪಿಪಿಐ) ಗಳಿಗೆ ಮಾತ್ರ ಅನ್ವಯಿಸುತ್ತವೆ. ಆದರೆ ಗ್ರಾಹಕರಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಪಿಪಿಐ ಹೇಳಿದೆ. ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಯುಪಿಐ ಮೂಲ GBಕ ಹಣ ಕಳುಹಿಸಲು ಯಾವುದೇ ಶುಲ್ಕ ಇರುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಗಿಫ್ಟ್ ಕಾರ್ಡ್ಗಳು, ವ್ಯಾಲೆಟ್ಗಳು, ಹಾಗೂ ಇನ್ನಿತರ ಪ್ರಿಪೇಡ್ ಸಾಧನಗಳ ಮೂಲಕ ಪ್ರಿಪೇಡ್ ವಹಿವಾಟು ನಡೆಸಿದರೆ ಏಪ್ರಿಲ್ 1 ರಿಂದ ಶೇ 1.1 ರವರೆಗೆ ಇಂಟರಚೇಂಜ್ ಶುಲ್ಕ ವಿಧಿಸಲಾಗುವುದು ಎಂದು ಎನ್ಸಿಪಿಐ ಸುತ್ತೋಲೆಯಲ್ಲಿ ಹೇಳಿದೆ ಎಂದು ವರದಿಯಾಗಿತ್ತು. 2,000 ರೂ.ಗಿಂತ ಹೆಚ್ಚಿನ ವಹಿವಾಟು ನಡೆಸಿದರೆ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಹೇಳಲಾಗಿತ್ತು.