ಸಮಗ್ರ ನ್ಯೂಸ್: ಈಗಾಗಲೇ ಕರ್ನಾಟಕ ವಿಧಾನಸಭೆ ಚುನಾವಣೆ ನೀತಿಸಂಹಿತೆ(code of conduct) ಜಾರಿಯಾಗಿದ್ದು ಮೇ.10ರಂದು ಮತದಾನ ಮತ್ತು ಮೇ.13 ರಂದು ಮತ ಎಣಿಕೆ ನಡೆಯಲಿದೆ.
ಈ ಹಿನ್ನಲೆ ನೀತಿ ಸಂಹಿತೆಯ ಕೆಲವು ನಿರ್ಬಂಧನೆಗಳು ಈ ಕೆಳಗಿನಂತಿವೆ.
1.ಹೊಸ ಕಾರ್ಯಕ್ರಮಗಳ ಅನುಷ್ಟಾನ, ಉದ್ಘಾಟನೆ ಮಾಡುವ ಹಾಗಿಲ್ಲ
- ಯಾವುದೇ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತಿಲ್ಲ.
- ಸಭೆ, ಸಮಾರಂಭಗಳ ನಡೆಸುವ ಮೊದಲು ಅನುಮತಿ ಪಡೆಯಬೇಕಾಗುತ್ತೆ.
4.ಬೈಕ್ ರ್ಯಾಲಿ, ಪ್ರಚಾರ ರ್ಯಾಲಿಗಳಿಗೆ ಅನುಮತಿ ಪಡೆಯುವುದು ಕಡ್ಡಾಯ.
5.ವಾಹನಗಳ ಮೇಲೆ ಪಕ್ಷದ ಬಾವುಟಗಳನ್ನು ಕಟ್ಟುವುದಕ್ಕೂ ಅನುಮತಿ ಬೇಕು. - ಹೊಸ ಟೆಂಡರ್‌ಗಳನ್ನೂ ಕರೆಯವುದಕ್ಕೆ ಅವಕಾಶವಿಲ್ಲ.
7.ಈಗಾಗಲೇ ಕರೆದಿರುವ ಟೆಂಡರ್‌ಗಳನ್ನು ಫೈನಲ್ ಮಾಡೋದಕ್ಕೂ ಆಗಲ್ಲ. - ಧ್ವನಿವರ್ದಕಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಬಳಸಬೇಕು.
- ಕೇಂದ್ರದ ನಾಯಕರು ಪ್ರಚಾರಕ್ಕೆ ಬರುವುದಾದರೆ ಅನುಮತಿ ಪಡೆಯಬೇಕು.
- ಮತದಾರರಿಗೆ ಆಮಿಷವೊಡ್ಡುವಂತಹ ಉಡುಗೊರೆಗಳನ್ನು ಕೊಡಬಾರದು.
- ಜನಪ್ರತಿನಿಧಿಗಳು, ಮಂತ್ರಿಗಳ ಸರ್ಕಾರಿ ಕಾರನ್ನು ಬಳಸುವ ಹಾಗಿಲ್ಲ.