Samagra news: ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಂಗಳೂರಿನ ಯುವಕ ಮೃತಪಟ್ಟಿದ್ದಾನೆ.
ಮೃತರನ್ನು ಮಂಗಳೂರು ಮಲ್ಲೂರಿನ ನಿವಾಸಿ, ಪಲ್ಲಿಬೆಟ್ಟು ಸುಲೈಮಾನ್(35) ಎಂದು ಗುರುತಿಸಲಾಗಿದೆ.
ಇವರು ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿಯಾಗಿದ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸುಲೈಮಾನ್ ಜುಬೈಲ್ ನ ಲುಮಿನಾಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಇವರು ಏ .20ರಂದು ಊರಿಗೆ ಬರುವವರಿದ್ದರು.