Ad Widget .

“ಬಾವಾ ನಕಲಿ ಹಕ್ಕುಪತ್ರ ಕೊಟ್ಟು ಮೋಸ ಮಾಡಿದ್ರು..!”
ಕೃಷ್ಣಾಪುರ 5ನೇ ವಾರ್ಡ್ ನಿವಾಸಿಗಳ ಆಳಲು

Samagra news: “ಮೊಯ್ದೀನ್ ಬಾವಾ ಶಾಸಕರಾಗಿದ್ದ ಅವಧಿಯಲ್ಲಿ ನಮ್ಮಿಂದ 19 ಸಾವಿರ ರೂ. ಹಣ ಪಡೆದು ನಕಲಿ ಹಕ್ಕುಪತ್ರ ಮಾಡಿಕೊಟ್ಟಿದ್ದರು. ಇದರಿಂದ ನಾವು ಹಣ ಕಳೆದುಕೊಂಡು ಮೋಸ ಹೋಗಿದ್ದಲ್ಲದೆ ಅನೇಕ ಸಮಸ್ಯೆಗಳು ಎದುರಾಯಿತು. ಈಗ ಶಾಸಕ ಭರತ್ ಶೆಟ್ಟಿ ಅವರ ನಿರಂತರ ಶ್ರಮದಿಂದ ಅಸಲಿ ಹಕ್ಕುಪತ್ರ ನಮ್ಮ ಕೈಗೆ ಸಿಗುವಂತಾಯಿತು” ಎಂದು ಹಕ್ಕುಪತ್ರ ಪಡೆದ ಕೃಷ್ಣಾಪುರ 5ನೇ ವಾರ್ಡ್ ನಿವಾಸಿಗಳು ಮಾಧ್ಯಮಗಳ ಮುಂದೆ ಹೇಳಿಕೆ‌ ನೀಡಿದರು. ಸುರತ್ಕಲ್‌ ಮಹಾನಗರ ಪಾಲಿಕೆಯ ಶಾಸಕರ ಕಚೇರಿಯಲ್ಲಿ ಶಾಸಕ ಭರತ್ ಶೆಟ್ಟಿಯವರಿಂದ ಹಕ್ಕುಪತ್ರ ಪಡೆದ ಫಲಾನುಭವಿಗಳು ಮಾಧ್ಯಮದ ಜೊತೆ ಮಾತಾಡಿ ಮಾಜಿ ಶಾಸಕ ಬಾವಾ ವಿರುದ್ಧ ಕಿಡಿಕಾರಿದರು.

Ad Widget . Ad Widget .

“ಕೃಷ್ಣಾಪುರದ 5ನೇ ವಾರ್ಡ್ 8ನೇ ಬ್ಲಾಕ್ ನ ೧೯ ಮನೆಗಳ ನಿವಾಸಿಗಳು ಹಕ್ಕುಪತ್ರಕ್ಕಾಗಿ ಸಾಕಷ್ಟು ಬಾರಿ ಅಲೆದಾಟ ನಡೆಸಿದ್ದೆವು. ಕಳೆದ ಚುನಾವಣೆ ಸಂದರ್ಭ ಮಾಜಿ ಶಾಸಕ ಮೊಯ್ದೀನ್ ಬಾವಾ ನಮ್ಮಿಂದ ತಲಾ ೧೯ ಸಾವಿರ ರೂ. ಹಣ ಪಡೆದು ಜೆರಾಕ್ಸ್ ಹಕ್ಕುಪತ್ರ ನೀಡಿದ್ದರು. ಇದನ್ನು ಬ್ಯಾಂಕಿನಲ್ಲಿ ವಿವಿಧ ಉದ್ದೇಶಕ್ಕಾಗಿ ಹೋಗಿ ತೋರಿಸಿದಾಗ ಇದು ನಕಲಿ ಹಕ್ಕು ಪತ್ರ ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದರು. ನಂತರದ ದಿನಗಳಲ್ಲಿ ಯುವಮೋರ್ಛಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ಬಳಿ ನಮ್ಮ ಸಮಸ್ಯೆ ಹೇಳಿದಾಗ ಅವರು ಶಾಸಕ ಭರತ್ ಶೆಟ್ಟಿ ಅವರ ಮುಖಾಂತರ ಅಸಲಿ ಹಕ್ಕುಪತ್ರ ಮಾಡಿಕೊಟ್ಟಿದ್ದಾರೆ. ಅವರಿಬ್ಬರಿಗೂ ನಮ್ಮ ಧನ್ಯವಾದಗಳು. ಬಾವಾ ಯಾಕೆ ಹೀಗೆ ಮಾಡಿದ್ದಾರೆಂದು ಗೊತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

Ad Widget . Ad Widget .

ಈ ವೇಳೆ ಮಾತಾಡಿದ ಭರತ್ ರಾಜ್ ಕೃಷ್ಣಾಪುರ, “ಓಟಿಗಾಗಿ ಮಾಜಿ ಶಾಸಕ ಮೊಯ್ದೀನ್ ಬಾವಾ ಸುಳ್ಳು ಹೇಳಿ ನಕಲಿ ಹಕ್ಕುಪತ್ರ ಮಾಡಿಸಿಕೊಟ್ಟಿದ್ದಾರೆ. ಆದರೆ ಇದೀಗ ಸಾಕಷ್ಟು ಮುತುವರ್ಜಿ ವಹಿಸಿ ಶಾಸಕ ಭರತ್ ಶೆಟ್ಟಿ ಅವರು ಹಕ್ಕುಪತ್ರ ಮಾಡಿಸಿಕೊಟ್ಟಿದ್ದಾರೆ. ಅಲ್ಲದೆ ಇದಕ್ಕೆ ಸಾಕಷ್ಟು ಮಂದಿ ಮುತುವರ್ಜಿ ವಹಿಸಿದ್ದಾರೆ” ಎಂದು ಸಂತಸ ಹಂಚಿಕೊಂಡರು.

ಹಕ್ಕು ಪತ್ರ ವಿತರಿಸಿ ಮಾತಾಡಿದ ಶಾಸಕ ಭರತ್ ಶೆಟ್ಟಿ ಅವರು, “ಕೆಲವೊಂದು ತೊಡಕುಗಳನ್ನು ನಿವಾರಿಸಿ ಮುಂದೆ‌ ನಿಮಗೆ ಯಾವುದೇ ಸಮಸ್ಯೆ ಬಾರದಂತೆ ಹಕ್ಕುಪತ್ರ ವಿತರಿಸಲಾಗಿದೆ. ಹಾಗೆಂದು ನೀವು ಇದನ್ನು ಬೇಕಾಬಿಟ್ಟಿ ಉಪಯೋಗಿಸದೆ ಜವಾಬ್ದಾರಿಯಿಂದ ಬಳಸಿ. ಹಕ್ಕು ಪತ್ರ ಕಳೆದುಹೋಗದಂತೆ ಎಚ್ಚರವಹಿಸಿ” ಎಂದರು.

ಮಂಗಳೂರು ಉತ್ತರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಕಾರ್ಪೋರೇಟರ್ ಗಳಾದ ಶ್ವೇತಾ ಪೂಜಾರಿ, ನಯನಾ ಕೋಟ್ಯಾನ್, ಲೋಕೇಶ್ ಬೊಳ್ಳಾಜೆ, ಸರಿತಾ ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *