Ad Widget .

ಮಂಗಳೂರು:ಬೈಕ್ ಕಳ್ಳರಿಬ್ಬರ ಬಂಧನ

ಸಮಗ್ರ ನ್ಯೂಸ್: ಬೈಕ್ ಕಳ್ಳತನ ಮಾಡಿ, ಅದೇ ಬೈಕ್‌ ನಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ಘಟನೆ ಮಂಗಳೂರಿನಿಂದ ವರದಿಯಾಗಿದೆ.

Ad Widget . Ad Widget .

ಚಿತ್ರದುರ್ಗ ಮೂಲದ ಫಾರಿಶ್‌ ಶರ್ಮಾ(19), ಧನುಷ್‌ (20) ಬಂಧಿತ ಆರೋಪಿಗಳು. ಯಮಹಾ ಅರ್ ಎಕ್ಸ್ ,ಬಜಾಜ್ ಪಲ್ಸರ್ ಬೈಕ್ ಗಳನ್ನು ಆರೋಪಿತಗಳಿಂದ ಸ್ವಾಧೀನಪಡಿಸಕೊಳ್ಳಲಾಗಿದೆ.

Ad Widget . Ad Widget .

ಮಾ.28ರಂದು ಮಂಗಳೂರು ನಗರದ ಮಲ್ಲಿಕಟ್ಟೆಯ ಬಳಿ ಬೈಕ್‌ ಸವಾರಿಯಲ್ಲಿದ್ದ ಇಬ್ಬರು ವ್ಯಕ್ತಿಗಳು ಸಂಶಯಸ್ಪದವಾಗಿ ಕಂಡು ಬಂದ ಬಗ್ಗೆ ಅವರನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಈ ಎರಡು ಬೈಕ್‌ ಗಳು ಈ ಹಿಂದೆ ಮಂಗಳೂರು ನಗರದ ಪಂಪವಲ್ ನ ಕಪಿತಾನಿಯಾ ಬಳಿ ಕಳವು ಮಾಡಿದ್ದ ಯಮಹಾ ಅರ್ ಎಕ್ಸ್ ಬೈಕ್ ನ್ನು ಹಾಗೂ ವಲೇನ್ಸಿಯಾ ಬಳಿ ಕಳವು ಮಾಡಿದ್ದ ಬಜಾಜ್ ಪಲ್ಸರ್ ಬೈಕ್ ಗಳೆಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳಲ್ಲಿ ಫಾರಿಶ್‌ ಶರ್ಮಾ ವಿರುದ್ದ 2022 ರಲ್ಲಿ ಚಿತ್ರದುರ್ಗ ಜಿಲ್ಲೆಯ ಬಡಾವಣೆ ಠಾಣೇಯಲ್ಲಿ ಬೈಕ್‌ ಕಳವು ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *