ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕವನ್ನು ಚುನಾವಣಾ ಆಯೋಗವು ಘೋಷಣೆ ಮಾಡಿದ್ದು ಮೇ 10ರಂದು ಚುಣಾವಣೆ ನಡೆಯಲಿದ್ದು ಮೇ 13 ರಂದು ಮತದಾನ ಎಣಿಕೆ ನಡೆಯಲಿದೆ.
ಈ ಕುರಿತು ಚುನಾವಣಾ ಆಯೋಗ ಬೆಳಗ್ಗೆ ೧೧.೩೦ರ ವೇಳೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಚುನಾವಣಾ ಆಯೋಗ ಕರ್ನಾಟಕದಲ್ಲಿ 5 ಕೋಟಿ 21ಲಕ್ಷ ಮತದಾರರು ಇದ್ದಾರೆ. ಅದರಲ್ಲಿ 2 ಕೋಟಿ 62 ಲಕ್ಷ ಪುರುಷ ಮತದಾರರು,2 ಕೋಟಿ 59 ಲಕ್ಷ ಮಹಿಳಾ ಮತದಾರರು ಇದ್ದಾರೆ. ಈ ಹಿನ್ನಲೆ ರಾಜ್ಯದಲ್ಲಿ 58283 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಒಂದೊಂದು ಮತಗಟ್ಟೆಗೆ ೮೮೩ ಮತದಾರರಿಗೆ ಅವಕಾಶ ನೀಡಲಾಗಿದೆ. ಹಾಗೇ 80ವರ್ಷ ಮೇಲ್ಪಟ್ಟ ವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
2023ರ ಮೇ 23ರ ಒಳಗೆ ವಿಧಾನಸಭೆ ಅಂತ್ಯವಾಗಬೇಕು. ಅದಕ್ಕೂ ಮುನ್ನ ಹೊಸ ಸರ್ಕಾರ ರಚನೆ ಆಗಬೇಕು. ಮೇ 24ಕ್ಕೆ ವಿಧಾನಸಭೆ 15ನೇ ವಿಧಾನಸಭೆ ಅವಧಿ ಮುಕ್ತಾಯವಾಗಲಿದೆ.
ಎ.13ರಂದು ಚುಣಾವಣೆ ಅಧಿಸೂಚಣೆ ಪ್ರಕಟವಾಗಲಿದ್ದು, ಎ.20 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಎ.21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಎ.24ರಂದು ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನವಾಗಿರುತ್ತದೆ.