Ad Widget .

ಹೊರಬಿತ್ತು ಸಿ-ವೋಟರ್ ಸಮೀಕ್ಷೆ| ಈ ಪಕ್ಷಕ್ಕೆ ಸಿಗಲಿದೆ ಬಹುಮತ

ಸಮಗ್ರ ನ್ಯೂಸ್: ಬಹುನಿರೀಕ್ಷಿತ ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಾಗಲೇ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದೆ. ಮೇ 10ನೇ ತಾರೀಕಿನಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇದಾದ 2 ದಿನಗಳ ಬಳಿಕ ಅಂದರೆ ಮೇ 13ನೇ ತಾರೀಕು ಚುನಾವಣಾ ಫಲಿತಾಂಶ ಹೊರಬೀಳಲಿದೆ.

Ad Widget . Ad Widget .

ಇನ್ನು, ಕಾಂಗ್ರೆಸ್​, ಬಿಜೆಪಿ ಮತ್ತು ಜೆಡಿಎಸ್​ ಸೇರಿದಂತೆ ಎಲ್ಲಾ ಪಕ್ಷಗಳು ಈ ಬಾರಿ ಹೇಗಾದರೂ ಚುನಾವಣೆ ಗೆದ್ದು ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಹಿಡಿಯಬೇಕು ಎಂದು ಸಜ್ಜಾಗಿವೆ. ಈ ಮಧ್ಯೆ ದೇಶದ ಪ್ರತಿಷ್ಠಿತ ಎಬಿಪಿ ಸಿ ವೋಟರ್ ಸಂಸ್ಥೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಸದ್ಯ ಸಿ ವೋಟರ್​ ಸಮೀಕ್ಷೆ ಪ್ರಕಟವಾಗಿದ್ದು, ಕಾಂಗ್ರೆಸ್​ಗೆ ಬಹುಮತ ಸಿಗಲಿದೆ ಎಂದು ತಿಳಿದು ಬಂದಿದೆ.

Ad Widget . Ad Widget .

ಕರ್ನಾಟಕದಲ್ಲಿ ಕಾಂಗ್ರೆಸ್​ 115-127, ಬಿಜೆಪಿ 68-80, ಜೆಡಿಎಸ್​​ 23-35, ಇತರೆ 2 ಸೀಟು ಗೆಲ್ಲಬಹುದು ಎಂದು ಸಿ ವೋಟರ್​ ಚುನಾವಣಾ ಪೂರ್ವ ಸಮೀಕ್ಷೆ ಹೇಳುತ್ತಿದೆ. ಈ ಮೂಲಕ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್​ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ.

ಏನಿದು ಸಿ ವೋಟರ್​ ಸಮೀಕ್ಷೆ..?
C Voter ಅಂದರೆ ಸೆಂಟರ್ ಫಾರ್ ವೋಟಿಂಗ್ ಒಪಿನಿಯನ್ ಮತ್ತು ಟ್ರೆಂಡ್ಸ್ ಇನ್ ಎಲೆಕ್ಷನ್ ರಿಸರ್ಚ್ ಎಂದರ್ಥ. ಸಿ ವೋಟರ್​​ ಸಂಸ್ಥೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದು ಭಾರತೀಯ ಅಂತರಾಷ್ಟ್ರೀಯ ಮತದಾನ ಸಂಸ್ಥೆಯಾಗಿದ್ದು, ಯಶವಂತ್ ದೇಶಮುಖ್ ಇದರ ಸಂಸ್ಥಾಪಕ ಸಂಪಾದಕರಾಗಿದ್ದಾರೆ.

Leave a Comment

Your email address will not be published. Required fields are marked *