Ad Widget .

ಜೈ ಶ್ರೀರಾಮ್ ಎನ್ನದ್ದಕ್ಕೆ ಕುರಾನ್ ಓದುತ್ತಿದ್ದ ವ್ಯಕ್ತಿಯ ಗಡ್ಡಕ್ಕೆ ಕತ್ತರಿ

Samagra News: ಜೈ ಶ್ರೀರಾಮ್ (Jai Shri Ram) ಎಂದು ಕೂಗಲು ನಿರಾಕರಿಸಿದ್ದಕ್ಕೆ ಅಪರಿಚಿತ ವ್ಯಕ್ತಿಗಳು ಮಸೀದಿಯೊಂದರ ಇಮಾಮ್‌ನನ್ನು ಥಳಿಸಿ, ಅವರ ಗಡ್ಡ ಕತ್ತರಿಸಿರುವ ಅಮಾನುಷ ಕೃತ್ಯ ಮಹಾರಾಷ್ಟ್ರದಲ್ಲಿ ನಡೆದಿದೆ.

Ad Widget . Ad Widget .

ಮಹಾರಾಷ್ಟ್ರದ ಅನ್ವಾ ಗ್ರಾಮದ ಮಸೀದಿಯಲ್ಲಿ ಇಮಾಮ್ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ಭಾನುವಾರ ಸಂಜೆ 7:30ರ ವೇಳೆಗೆ ಮಸೀದಿಯೊಳಗೆ ಕುರಾನ್ ಓದುತ್ತಿದ್ದ ವೇಳೆ ಬಂದ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ ಎಂದು ಇಮಾಮ್ ಜಾಕಿರ್ ಸೈಯದ್ ಖಾಜಾ ತಿಳಿಸಿದ್ದಾರೆ.

Ad Widget . Ad Widget .

ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಬಟ್ಟೆ ಸುತ್ತಿಕೊಂಡು, ಮಸೀದಿಯನ್ನು ಪ್ರವೇಶಿಸಿದ್ದಾರೆ. ಇಮಾಮ್ ಕುರಾನ್ ಓದುತ್ತಿದ್ದ ವೇಳೆ ಅಪರಿಚಿತರು ಜೈ ಶ್ರೀರಾಮ್ ಎನ್ನಲು ಒತ್ತಾಯಿಸಿದ್ದಾರೆ. ಇಮಾಮ್ ಜೈ ಶ್ರೀರಾಮ್ ಎನ್ನಲು ನಿರಾಕರಿಸಿದಾಗ ಮೂವರು ವ್ಯಕ್ತಿಗಳು ಅವರನ್ನು ಮಸೀದಿಯ ಹೊರಗೆ ಎಳೆದುಕೊಂಡು ಹೋಗಿ, ಥಳಿಸಿದ್ದಾರೆ. ರಾಸಾಯನಿಕ ಲೇಪಿತ ಬಟ್ಟೆಯನ್ನು ಬಳಸಿ ಅವರನ್ನು ಪ್ರಜ್ಞಾಹೀನರನ್ನಾಗಿ ಮಾಡಿದ್ದಾರೆ. ತಮಗೆ ಪ್ರಜ್ಞೆ ಬಂದಾಗ ಕಿಡಿಗೇಡಿಗಳು ಗಡ್ಡ ಕತ್ತರಿಸಿರುವುದು ತಿಳಿದುಬಂದಿರುವುದಾಗಿ ಅವರು ಹೇಳಿದ್ದಾರೆ.

Leave a Comment

Your email address will not be published. Required fields are marked *