Ad Widget .

ವಿಪತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿದೆ ಶೌರ್ಯ ತಂಡ| ರಾಜ್ಯದಲ್ಲಿ 70 ತಂಡಗಳನ್ನು ನೀಡಿದ‌ SKDRDP

ಸಮಗ್ರ ನ್ಯೂಸ್: ರಾಜ್ಯದ ಬಹುತೇಕ ಕಡೆಗಳಲ್ಲಿ ಕಾಡ್ಗಿಚ್ಚು, ರಸ್ತೆ ಅಪಘಾತದಂತಹ ವಿಪತ್ತುಗಳು ಸಂಭವಿಸುತ್ತಿವೆ. ಕುಡಿಯುವ ನೀರಿನ ಸಮಸ್ಯೆ ಸಹ ಅಲ್ಲಲ್ಲಿ ಕಾಡುತ್ತಿವೆ. ಇಂತಹ ವಿಪತ್ತುಗಳನ್ನು ಎದುರಿಸಲು ಅಗ್ನಿಶಾಮಕ ಪೊಲೀಸ್ ಇಲಾಖೆಗಳೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಪ್ರಾಯೋಜಿತ ‘ಶೌರ್ಯ’ ವಿಪತ್ತು ನಿರ್ವಹಣಾ ತಂಡವು ಸಕ್ರೀಯವಾಗಿ ತೊಡಗಿಕೊಂಡಿದೆ.

Ad Widget . Ad Widget .

ವಿಪತ್ತುಗಳ ನಿರ್ವಹಣೆಗೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ಮೂಡಿಬಂದ ಕಾರ್ಯಕ್ರಮವೇ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮ. ವಿಪತ್ತಿನಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸ್ವಯಂಸೇವಕರು ಶೌರ್ಯ, ಪರಾಕ್ರಮದಿಂದ ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Ad Widget . Ad Widget .

2022-23 ನೇ ಸಾಲಿನಲ್ಲಿ 16 ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದ್ದು, ಇದೀಗ ರಾಜ್ಯದಲ್ಲಿ 70 ವಿಪತ್ತು ನಿರ್ವಹಣಾ ಸಮಿತಿಗಳು ವಿಪತ್ತು ನಿರ್ವಹಣೆಗೆ ಸಜ್ಜುಗೊಂಡಿವೆ. ವಿಪತ್ತು ಸಂಭವಿಸುವ
ಜಿಲ್ಲೆಗಳಾದ ದ.ಕ, ಉ.ಕ, ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರು, ಧಾರವಾಡ, ಬೆಳಗಾವಿ, ಬಾಗಲಕೋಟೆ, ಕಲ್ಬುರ್ಗಿ, ಬೆಂಗಳೂರು ಗ್ರಾಮಾಂತರ ಹೀಗೆ 11 ಜಿಲ್ಲೆಗಳ 70 ತಾಲ್ಲೂಕುಗಳಲ್ಲಿ ಶೌರ್ಯ ತಂಡಗಳನ್ನು ರಚಿಸಲಾಗಿದೆ.

ಪ್ರತೀ ತಾಲ್ಲೂಕು ತಂಡಗಳು 100 ರಿಂದ 200 ಸ್ವಯಂಸೇವಕರನ್ನು ಒಳಗೊಂಡಿದ್ದು ರಾಜ್ಯದಲ್ಲಿ ಒಟ್ಟು 9240 ಸ್ವಯಂಸೇವಕರು ಸ್ವಯಂಪ್ರೇರಣೆಯಿಂದ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ರಾಷ್ಟ್ರೀಯ ವಿಪತ್ತು

ನಿರ್ವಹಣಾ ತಂಡದಿಂದ ತರಬೇತಿ:
ಮಳೆಗಾಲದಲ್ಲಿ ಎದುರಾಗುವ ವಿವಿಧ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ತಜ್ಞತೆ ರೂಢಿಸುವ ನಿಟ್ಟಿನಲ್ಲಿ ಸ್ವಯಂಸೇವಕರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್.ಡಿ.ಆರ್.ಎಫ್)ಯಿಂದ ತರಬೇತಿಯನ್ನು ನೀಡಲಾಗಿದೆ. ಅಲ್ಲದೇ ಎಸ್.ಡಿ.ಆರ್.ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ, ಪೊಲೀಸ್ ಇಲಾಖೆಗಳಿಂದ ಸಹ ವೈಜ್ಞಾನಿಕ ತರಬೇತಿ ನೀಡಲಾಗಿದೆ.

ಸ್ವಯಂಸೇವಕರಿಗೆ ವಿಶೇಷ ತಜ್ಞತೆ ಮೂಡಿಸುವ ನಿಟ್ಟಿನಲ್ಲಿ ಚೆನ್ನೈ ಮೂಲದ ಉಷಾ ಫೈರ್ ಸೇಫ್ಟಿ ಕಂಪೆನಿಯಿಂದ ಜೀವ ರಕ್ಷಣಾ ಕೌಶಲ್ಯ ತರಬೇತಿಯನ್ನು ನೀಡಲಾಗಿದೆ.

Leave a Comment

Your email address will not be published. Required fields are marked *