Ad Widget .

ಬಂಟ್ವಾಳ: ಬರೋಬ್ವರಿ 4.33 ಲಕ್ಷ ರೂ ಗಳಿಗೆ ಹರಾಜಾಯ್ತು ಹಲಸು| Jack Fruit ನಿಂದ ಹೊಡೆದ ಜಾಕ್ ಪಾಟ್!!

ಸಮಗ್ರ ನ್ಯೂಸ್: ಧಾರ್ಮಿಕ ಕ್ಷೇತ್ರದಲ್ಲಿ ಕಾಣಿಕೆಯಾಗಿ ಹರಕೆ ರೂಪದಲ್ಲಿ ಬಂದ ವಸ್ತುಗಳನ್ನು ಹರಾಜು ಮಾಡುವುದು ಸಾಮಾನ್ಯ.
ಇದು ದೇಶಾದ್ಯಂತ ಹಲವು ಭಾಗಗಳಲ್ಲಿ ನಡೆಯುತ್ತದೆ. ದೇವರ ಕಾಣಿಕೆಯಾಗಿ ಬರುವ ಇಂತಹ ವಸ್ತುಗಳನ್ನು ಕೊಳ್ಳುವುದಕ್ಕೆ ಭಕ್ತರೂ ಕೂಡ ತುಂಬಾ ಆಸಕ್ತಿ ತೋರಿಸುತ್ತಾರೆ. ಆ ವಸ್ತುವಿನ ಮೂಲಬೆಲೆ ಲೆಕ್ಕಿಸದೇ ನೂರುಪಟ್ಟು, ಸಾವಿರಪಟ್ಟು ಹಣ ನೀಡಿ ಕೊಳ್ಳುತ್ತಾರೆ.

Ad Widget . Ad Widget .

ಇಂತಹುದೇ ಒಂದು ‌ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದ್ದು ಕಾಣಿಕೆಯಾಗಿ ಬಂದಿದ್ದ ಹಲಸಿನ ಹಣ್ಣು ಭರ್ಜರಿ ಮೊತ್ತಕ್ಕೆ ಹರಾಜಾಗಿದೆ.

Ad Widget . Ad Widget .

ಮೂಲರಪಟ್ಣ ಮಸೀದಿಯಲ್ಲಿ ಭಕ್ತನೊಬ್ಬ ಹರಾಜಿನಲ್ಲಿ ಹಲಸಿನ ಹಣ್ಣನ್ನು ಬರೋಬ್ಬರಿ 4.33 ಲಕ್ಷ ರೂಪಾಯಿ ನೀಡಿ ಪಡೆದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಲರಪಟ್ಣದ ನವೀಕೃತ ಮಸೀದಿಯ ಉದ್ಘಾಟನೆ ವೇಳೆ ಮಸೀದಿಗೆ ಅರ್ಪಣೆಯಾಗಿದ್ದ ಹಲಸಿನ ಹಣ್ಣನ್ನು ಹರಾಜಿಗೆ ಇಡಲಾಗಿತ್ತು.

ಈ ಹರಾಜಿನಲ್ಲಿ ಸ್ಥಳೀಯ ಪ್ರಮುಖರಾದ ಅಝೀಜ್​ ಹಾಗೂ ಲತೀಫ್​ ಎಂಬುವವರ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೆ ಲತೀಫ್​ ಹಲಸಿನ ಹಣ್ಣನ್ನು ಬರೋಬ್ಬರಿ 4,33,333 ರೂಪಾಯಿಗಳಿಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

ಈ ಹರಾಜಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇದೊಂದೇ ಅಲ್ಲದೆ ಹಲವು ವಸ್ತುಗಳನ್ನು ಹರಾಜು ಮಾಡಲಾಗಿದ್ದು, ಒಳ್ಳೆಯ ಮೊತ್ತ ಲಭಿಸಿದೆ. ಈ ಮೊತ್ತವನ್ನು ಆಡಳಿತ ಸಮಿತಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *