Ad Widget .

PAN card – Adhar ಲಿಂಕ್ ಕಡ್ಡಾಯವೇ? ಮಾಡದಿದ್ರೆ ಏನಾಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್‌ ಲಿಂಕ್ ಆಗಿದ್ಯಾ? ಅಥವಾ ಆಗಿಲ್ವಾ? ಮಾರ್ಚ್ 31ರೊಳಗೆ ಲಿಂಕ್ ಆಗದಿದ್ರೆ 10 ಸಾವಿರ ರೂಪಾಯಿ ಫೈನ್ ಕಟ್ಟಬೇಕಾ? ಆಧಾರ್, ಪ್ಯಾನ್ ಕಾರ್ಡ್‌ ಲಿಂಕ್‌ ಯಾರಿಗೆಲ್ಲಾ ಕಡ್ಡಾಯ. ಒಂದು ವೇಳೆ ಆಧಾರ್, ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ರೆ ಏನಾಗುತ್ತೆ. ಇತ್ತೀಚಿಗೆ ಇಂತಹ ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಸುಳಿದಾಡುತ್ತಿವೆ. ಸಾಮಾನ್ಯ ಜನರು ಹೆದರೋ ಅವಶ್ಯಕತೆಯೇ ಇಲ್ಲ. ಯಾಕೆ ಗೊತ್ತಾ?

Ad Widget . Ad Widget .

ಪ್ಯಾನ್, ಆಧಾರ್ ಕಾರ್ಡ್‌ ಲಿಂಕ್ ಮಾಡೋದು ಕಡ್ಡಾಯ. ಇದಕ್ಕೆ CBDT ಅಂದ್ರೆ ಕೇಂದ್ರ ಸರ್ಕಾರದ ನೇರ ತೆರಿಗೆ ಮಂಡಳಿ ಮಾರ್ಚ್‌ 31ರ ಗಡುವು ವಿಧಿಸಿದೆ. ಕಳೆದ ವರ್ಷ ಮಾರ್ಚ್‌ನಲ್ಲೇ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಒಂದು ಸುತ್ತೋಲೆಯನ್ನ ಹೊರಡಿಸಿತ್ತು. ಆ ಸುತ್ತೋಲೆ ಪ್ರಕಾರ ಮಾರ್ಚ್‌ 31ರ ಒಳಗೆ ಪ್ಯಾನ್, ಆಧಾರ್‌ ಕಾರ್ಡ್‌ ಲಿಂಕ್ ಮಾಡಬೇಕು. ಒಂದು ವೇಳೆ ಲಿಂಕ್ ಮಾಡದಿದ್ರೆ ನಿಮ್ಮ ಪ್ಯಾನ್ ಕಾರ್ಡ್‌ ನಿಷ್ಕ್ರೀಯವಾಗುತ್ತದೆ.

Ad Widget . Ad Widget .

ಮಾರ್ಚ್ 31, 2022ಕ್ಕೂ ಮೊದಲು ಆಧಾರ್, ಪ್ಯಾನ್ ಲಿಂಕ್ ಮಾಡೋದು ಉಚಿತವಾಗಿತ್ತು. ಆ ನಂತರ ಅಂದ್ರೆ ಏಪ್ರಿಲ್ 1, 2022ರಿಂದ 500 ರೂಪಾಯಿ ದಂಡ ಹಾಕಲಾಯ್ತು. ಜುಲೈ 1, 2022ರಿಂದ ಶುಲ್ಕದ ಮೊತ್ತವನ್ನು 1000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಯ https://www.incometax.gov.in/iec/foportal/ ಈ ಅಧಿಕೃತ ವೆಬ್‌ಸೈಟ್‌ನಲ್ಲಿ ಇದರ ಬಗ್ಗೆ ಮಾಹಿತಿ ಲಭ್ಯವಿದೆ.

ಆಧಾರ್, ಪ್ಯಾನ್ ಲಿಂಕ್ ಆಗದಿದ್ರೆ ಏನಾಗುತ್ತೆ?
ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್‌ ನಿಷ್ಕ್ರೀಯಗೊಳ್ಳುತ್ತದೆ.
50,000ಕ್ಕೂ ಹೆಚ್ಚಿನ ಹಣವನ್ನು ಠೇವಣಿ ಇಡಲು ಆಗದು.
50,000ಕ್ಕೂ ಹೆಚ್ಚಿನ ಹಣವನ್ನು FD ಅಂದ್ರೆ ಸ್ಥಿರ ಠೇವಣಿ ಆಗಲ್ಲ
TDS/TCS ಕಡಿತಗೊಳ್ಳುವ ಮೊತ್ತ ಹೆಚ್ಚಾಗುತ್ತದೆ.
ಆದಾಯ ತೆರಿಗೆ ರಿಟರ್ನ್ ಫೈಲ್‌ ಮಾಡಲು ಆಗಲ್ಲ.
ಮ್ಯೂಚುವಲ್ ಫಂಡ್ ಹೂಡಿಕೆ ಸಾಧ್ಯವಿಲ್ಲ.
ಹೂಡಿಕೆದಾರರ NSE ಮತ್ತು BSE ವರ್ಗಾವಣೆ ಆಗಲ್ಲ.
ಪ್ಯಾನ್ ಇಲ್ಲದಿದ್ರೆ ವಿದೇಶಿ ಕರೆನ್ಸಿ ಕೊಳ್ಳಲು ಆಗುವುದಿಲ್ಲ.

ಆಧಾರ್, ಪ್ಯಾನ್ ಕಾರ್ಡ್‌ ಲಿಂಕ್ ಕಡ್ಡಾಯವಾದರೂ ಇದು ಎಲ್ಲರಿಗೂ ಅನ್ವಯವಾಗಲ್ಲ. ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಪ್ರಕಾರ ಈ ಕೆಳಗಿನ ವ್ಯಕ್ತಿಗಳಿಗೆ ಕಡ್ಡಾಯವಲ್ಲ.

80 ವರ್ಷ ಮೇಲ್ಪಟ್ಟವರು ಲಿಂಕ್ ಮಾಡುವಂತಿಲ್ಲ.
ದೇಶದ ಪೌರತ್ವ ಯಾರು ಪಡೆದಿಲ್ಲವೋ ಅವರಿಗೆ ಕಡ್ಡಾಯವಲ್ಲ.
ಅನಿವಾಸಿ ಭಾರತೀಯರು
ಅಸ್ಸಾಂ, ಮೇಘಾಲಯ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು, ಕಾಶ್ಮೀರದ ನಿವಾಸಿಗಳು

ಆಧಾರ್, ಪ್ಯಾನ್ ಲಿಂಕ್ ಕಡ್ಡಾಯ ಯಾಕೆ?
ಆಧಾರ್, ಪ್ಯಾನ್ ಕಾರ್ಡ್‌ ಲಿಂಕ್ ಕಡ್ಡಾಯಗೊಳಿಸಲು ಕಾರಣವಿದೆ. ಕೆಲವರ ಬಳಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳು ಇದ್ದದ್ದು ಕಂಡು ಬಂದಿದೆ. ಅಲ್ಲದೇ ದೇಶಾದ್ಯಂತ ನಕಲಿ ಪ್ಯಾನ್ ಕಾರ್ಡ್‌ಗಳು ಚಲಾವಣೆಯಲ್ಲಿದ್ದವು. ಇದರಿಂದ ತೆರಿಗೆಯ ಲೆಕ್ಕಾಚಾರ ಮತ್ತು ಆದಾಯ ತೆರಿಗೆ ಸಂಗ್ರಹಕ್ಕೆ ತೀವ್ರ ಅಡಚಣೆ ಆಗುತ್ತಿತ್ತು. ಹೀಗಾಗಿ ಕೇಂದ್ರ ಸರ್ಕಾರ ತೆರಿಗೆ ವಂಚನೆಗೆ ಕಡಿವಾಣ ಹಾಕಲು ಮುಂದಾಗಿದ್ದು, ಆಧಾರ್, ಪ್ಯಾನ್ ಲಿಂಕ್ ಕಡ್ಡಾಯಗೊಳಿಸಿದೆ.

Leave a Comment

Your email address will not be published. Required fields are marked *