ಸಮಗ್ರ ನ್ಯೂಸ್: ಹೊರಗಡೆಯಿಂದ ತಂದ ಜ್ಯೂಸ್ ಗಳನ್ನು ಕುಡಿಯುವ ಬದಲು ಮನೆಯಲ್ಲಿ ರುಚಿಕರವಾದ ಮಿಲ್ಕ್ ಶೇಕ್ ಗಳನ್ನು ಮಾಡಿಕೊಂಡು ಕುಡಿಯುವುದರಿಂದ ದೇಹದ ಆರೋಗ್ಯಕ್ಕೂ ಒಳ್ಳೆಯದು ಹಾಗೇ ರುಚಿಕರವಾಗಿಯೂ ಇರುತ್ತದೆ. ಇವತ್ತು ಬಾಳೆಹಣ್ಣನ್ನು ಉಪಯೋಗಿಸಿ ಮಾಡಬಹುದಾದ ಮಿಲ್ಕ್ ಶೇಕ್ ಬಗ್ಗೆ ತಿಳಿಯೋಣ.
ಬೇಕಾಗುವ ಸಾಮಗ್ರಿಗಳು:
2- ಹದ ಗಾತ್ರದ ಬಾಳೆಹಣ್ಣು, 5-6 ಖರ್ಜೂರ, 2 ಕಪ್- ಹಾಲು, ½ ಟೀ ಸ್ಪೂನ್- ಏಲಕ್ಕಿ ಪುಡಿ, ½ ಟೀ ಸ್ಪೂನ್- ಚಕ್ಕೆ ಪುಡಿ, ¾ ಕಪ್- ಐಸ್ ಕ್ಯೂಬ್ಸ್.
ಮಾಡುವ ವಿಧಾನ:
ಒಂದು ಬ್ಲೆಂಡರ್ ಜಾರಿಗೆ ಬಾಳೆಹಣ್ಣು, ಖರ್ಜೂರ, ಹಾಲು, ಏಲಕ್ಕಿ ಪುಡಿ, ಚಕ್ಕೆ ಪುಡಿ, ಐಸ್ ಕ್ಯೂಬ್ಸ್ ಸೇರಿಸಿ ಬ್ಲೆಂಡ್ ಮಾಡಿಕೊಂಡು ಗ್ಲಾಸ್ ಗೆ ಹಾಕಿಕೊಳ್ಳಿ.
ಬೇಕಿದ್ದರೆ ಇದರ ಮೇಲೆ ಕತ್ತರಿಸಿದ ಬಾದಾಮಿ ಚೂರುಗಳನ್ನು ಉದುರಿಸಿ ಸರ್ವ್ ಮಾಡಿ. ಒಂದು ಗ್ಲಾಸ್ ಕುಡಿದರೆ ಹೊಟ್ಟೆ ತುಂಬಿದಂತೆ ಆಗುತ್ತದೆ. ವರ್ಕೌಟ್ ನಂತರ ಕೂಡ ಇದನ್ನು ಕುಡಿಯಬಹುದು. ಮಕ್ಕಳಿಗೂ ಇದು ತುಂಬಾ ಒಳ್ಳೆಯದು.