ಪಡುಬಿದ್ರಿ: ಬೈಕ್ ಗೆ ಟ್ಯಾಂಕರ್ ಡಿಕ್ಕಿ| ಸವಾರರಿಬ್ಬರು ಸ್ಪಾಟ್ ಡೆತ್

ಸಮಗ್ರ ನ್ಯೂಸ್: ಬೈಕ್ ಗೆ ಟ್ಯಾಂಕರ್‌ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಉಚ್ಚಿಲ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.

Ad Widget ... ..

ಬೈಕ್ ಗೆ ಹಿಂದಿನಿಂದ ವೇಗವಾಗಿ ಬಂದ ಟ್ಯಾಂಕರ್ ಢಿಕ್ಕಿ ಹೊಡೆದಾಗ ಓರ್ವ ಸವಾರನನ್ನು ಕೆಲವು ಮೀಟರ್ ದೂರದವರೆಗೆ ಎಳೆದೊಯ್ದು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ನಿಂತಿದೆ.

Ad Widget

ಮೃತರನ್ನು ಪಲಿಮಾರು ನಿವಾಸಿಗಳಾದ ಸುಬ್ರಮಣ್ಯ ಹಾಗೂ ಗಿರೀಶ ಎಂದು ಗುರುತಿಸಲಾಗಿದೆ. ಇವರಿಬ್ಬರು ಬೈಕಿನಲ್ಲಿ ಉಡುಪಿಯಿಂದ ಪಡುಬಿದ್ರಿಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪಡುಬಿದ್ರೆ ಪೊಲೀಸರು ತಿಳಿಸಿದ್ದಾರೆ

Leave a Comment

Your email address will not be published. Required fields are marked *