ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಅರಮನೆಗಯ ಎಂಬಲ್ಲಿ ಸುಮಾರು 30 ವರ್ಷಗಳಿಂದ ಬೇಡಿಕೆಯ ಸೇತುವೆಯನ್ನು ನಿರ್ಮಿಸದ ಹಿನ್ನಲೆ ಆ ಭಾಗದ ಜನರು ಇದೀಗ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಅರಮನೆಗಯ ಎಂಬ ಊರು ಹಳ್ಳಿ ಪ್ರದೇಶವಾಗಿದ್ದು ಮರ್ಕಂಜ ಹಾಗೂ ಅಂರತೋಡು ಗ್ರಾಮಕ್ಕೆ ಸೇರಿಕೊಂಡಿರುವ ಊರಾಗಿದೆ. ಈ ಭಾಗದಲ್ಲಿ ಸುಮಾರು ನೂರಕ್ಕಿಂತ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. ಈ ಊರಿನ ಮಧ್ಯದಲ್ಲಿ ನದಿಯಿದ್ದು, ಮಳೆಗಾಲದಲ್ಲಿ ಉಕ್ಕಿ ಹರಿಯುತ್ತದೆ. ಆ ಸಮಯದಲ್ಲಿ ಅಲ್ಲಿಯ ಜನರು ಸೇರಿದಂತೆ ಶಾಲಾ ಮಕ್ಕಳ ಓಡಾಟ ತುಂಬಾ ಕಷ್ಟಕರವಾದ ಕಾರಣ ಅಲ್ಲಿಯ ಜನರು ಸೇರಿ ಅಡಿಕೆ ಮರದ ತೂಗು ಸೇತುವೆಯನ್ನು ನಿರ್ಮಿಸಿದ್ದಾರೆ.
ಆದರೆ ಆ ಸೇತುವೆಯಲ್ಲಿ ನದಿ ದಾಟುವುದೆಂದರೆ ಅರ್ಧ ಜೀವವೇ ನಿಂತು ಬಿಡುತ್ತದೆ. ಹಾಗಾಗಿ ಆ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಿಕೊಡಬೇಕೆಂದು ಹಲವಾರು ವರ್ಷಗಳಿಂದ ಇಲ್ಲಿಯ ಜನರು ಜನಪ್ರತಿನಿದಿಗಳಲ್ಲಿ ಹಾಗು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಅಲ್ಲದೆ ಹಲವು ಭಾರಿ ಪ್ರತಿಭಟನೆಯನ್ನು ಕೂಡ ಹಮ್ಮಿಕೊಂಡಿದ್ದರು. ಆದರೆ ಇವರ ಮನವಿಗೆ ಯಾವುದೇ ಜನಪ್ರತಿನಿಧಿಯಾಗಲಿ, ಅಧಿಕಾರಿಯಾಗಲಿ ಇದುವರೆಗೆ ಸಪ್ಪಂದನೆ ಮಾಡಲಿಲ್ಲ.
ಹಾಗಾಗಿ ಈ ಭಾಗದ ಜನರು ತಮ್ಮ ಬೇಡಿಗೆ ಈಡೇರದಿದ್ದಲ್ಲಿ ಮುಂದಿನ ಯಾವುದೇ ಚುನಾವಣೆಗೆ ಮತದಾನ ಮಾಡುವುದಿಲ್ಲ ಎಂದು ನಿರ್ಧರಿಸಿದ್ದಾರೆ.
ಕೋಟಿ ಕೋಟಿ ಅನುದಾನದ ಕೋಟಿ ಸುಳ್ಳು: ಈ ಬಗ್ಗೆ ಸಚಿವ ಅಂಗಾರ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಅಲ್ಲಿ ಜನ ನಮ್ಮ ಊರಿಗೊಂದು ಸೇತುವೆ ನಿರ್ಮಿಸಿ ಕೊಡಿ ಎಂದು ಮನವಿ ಕೊಡಲು ಹೋದರೆ “ ಸೇತುವೆ ನಿರ್ಮಿಸಲು 2 ಕೋಟಿ ಅನುದಾನ ಮಂಜೂರಾಗಿದೆ, ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ಮುಗಿಸಿ ಕೆಲಸ ಪ್ರಾರಂಭ ಮಾಡುತ್ತೇವೆ” ಎಂದು ಸುಳ್ಳು ಭರವಸೆ ನೀಡುವುದಲ್ಲದೆ ಇದುವರೆಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ.
ಈ ಭಾಗದಲ್ಲಿ ಸುಮಾರು ನೂರಕ್ಕಿಂತ ಹೆಚ್ಚು ಮನೆಗಳಿದ್ದು ತಮ್ಮ ಊರಿಗೆ ಸೇತುವೆಯ ಬೇಡಿಕೆಯನ್ನು ಈಡೇರಿಸದ ಜನಪ್ರತಿನಿಧಿಗಳ ವಿರುಧ್ಧ ಈ ಊರಿನ ಜನ ಆಕ್ರೋಶಗೊಂಡು ಮುಂದಿನ ಯಾವುದೇ ಚುಣಾವಣೆಗೆ ಮತದಾನ ಮಾಡಿವುದಿಲ್ಲ ಎಂದು ನಿರ್ಧಾರಿಸಿ ತಮ್ಮ ತಮ್ಮ ಮನೆಯಲ್ಲಿ ಮತದಾನ ಬಹಿಷ್ಕಾರದ ಭಿತ್ತಿ ಪತ್ರವನ್ನು ಅಂಟಿಸಿದ್ದಾರೆ. ಅದಲ್ಲದೆ ತಮ್ಮ ಊರಿಗೆ ಸಂಪರ್ಕಿಸುವ ಊರಿನ ಸುತ್ತಮುತ್ತ ಮತದಾನ ಬಹಿಷ್ಕಾರದ ಬ್ಯಾನರದ ಅಳವಡಿಸಿದ್ದಾರೆ.
ಬ್ಯಾನರ್ ಹರಿದವರಿಗೆ ಕೊರಗಜ್ಜ ಶಿಕ್ಷೆ ನೀಡಲಿ: ತಮ್ಮ ಊರಿನ ಬೇಡಿಕೆ ಈಡೇರದ ಹಿನ್ನಲೆ ಊರಿನ ಸಮಸ್ತ ಜನರು ಸೇರಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದರು. ಈ ಬ್ಯಾನರ್ ಕಂಡು ಇಲ್ಲಿಯ ಗ್ರಾಮ ಪಂಚಾಯತ್ ಸದಸ್ಯರಿಗೆ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಮುಜುಗರಗೊಂಡು ಆ ಬ್ಯಾನರ್‌ನ್ನು ಕಿತ್ತು ಎಸೆದಿದ್ದಾರೆ. ಈ ವಿಡೀಯೋ ಕೂಡ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಿಂದ ಮತ್ತಷ್ಟು ಆಕ್ರೋಶ ಕೊಂಡ ಅರಮನೆಗಾಯ ನಿವಾಸಿಗಳು ಕೊರಗಜ್ಜ ಸೇರಿದಂತೆ ಸ್ಥಳೀಯ ದೈವ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
Very good decision. Yava jana pratinidhi kelsa madalla avarige navu vote hakade iruvudu olleya nirdhara.