Ad Widget .

ಬೆಂಗಳೂರು ಈಗ ಪಿಂಕ್ ಸಿಟಿ| ಉದ್ಯಾನನಗರಿ‌ ತುಂಬೆಲ್ಲಾ ಗುಲಾಬಿ ರಂಗು

ಸಮಗ್ರ ನ್ಯೂಸ್: ಉದ್ಯಾನ ನಗರಿ ಗಾರ್ಡನ್‌ ಸಿಟಿ ಸಿಲಿಕಾನ್ ಸಿಟಿ, ಐಟಿ ಬಿಟಿ ಹಬ್‌, ಬೆಂದಕಾಳೂರು ಮುಂತಾದ ಹಲವು ಹೆಸರು ಹಾಗೂ ಹಿರಿಮೆಯಿಂದ ಗುರುತಿಸಿಕೊಂಡಿರುವ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು ವಸಂತಕಾಲದಲ್ಲಿ ಆಕಾಶದಿಂದ ನೋಡುವಾಗ ಹೇಗೆ ಕಾಣಿಸುತ್ತೆ ಎಂಬ ಕುತೂಹಲ ಎಲ್ಲರಿಗೂ ಇದೆ.

Ad Widget . Ad Widget .

ಇದಕ್ಕೆ ಉತ್ತರವಾಗಿ ಡ್ರೋನ್‌ ಮೂಲಕ ಸೆರೆ ಹಿಡಿದ ವಿಡಿಯೋವೊಂದು ವೈರಲ್ ಆಗಿದೆ. ಬೆಂಗಳೂರಿನ ಸೌಂದರ್ಯಕ್ಕೆ ಕಳಶವಿಟ್ಟಂತಿದ್ದು, ನೋಡಲು ಎರಡು ಕಣ್ಣು ಸಾಲದೆಂಬಂತಿದೆ ಈ ಮನಮೋಹಕ ದೃಶ್ಯಾವಳಿ.

Ad Widget . Ad Widget .

ವಸಂತಕಾಲದಲ್ಲಿ ಅರಳಿ ನಿಂತ ಹೂಗಳು ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಬೆಂಗಳೂರಿನ ಅಲ್ಲಲ್ಲಿ ದೊಡ್ಡ ದೊಡ್ಡ ಮರಗಳಲ್ಲಿ ಗುಲಾಬಿ ಬಣ್ಣದ ಹೂಗಳು ಅರಳಿ ನಿಂತಿದ್ದು, ಇದು ಸಿಲಿಕಾನ್ ವ್ಯಾಲಿಯ ಸೌಂದರ್ಯವನ್ನು ಹೆಚ್ಚಿಸಿದೆ. ಡ್ರೋಣ್ ಮೂಲಕ ವಿವಿಧ ಆಯಾಮದಿಂದ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ವೈಮಾನಿಕ ದೃಶ್ಯಗಳನ್ನು ಸೆರೆ ಹಿಡಿಯುವ ಫೋಟೋಗ್ರಾಫರ್ ರಾಜ್ ಮೋಹನ್ ಎಂಬುವವರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಇವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬೆಂಗಳೂರಿನ ಸೌಂದರ್ಯ ಜಗತ್ತಿಗೆ ಸಾರುವ ಎರಡು ವಿಡಿಯೋಗಳನ್ನು ಪೋಸ್ಟ್‌ ಮಾಡಿದ್ದು, ಕಣ್ಮನ ಸೆಳೆಯುತ್ತಿದೆ.

ವಿಡಿಯೋದಲ್ಲಿ ಅತ್ತಿತ್ತ ದೊಡ್ಡ ದೊಡ್ಡ ಮರಗಳು ಹೂ ಬಿಟ್ಟು, ಗುಲಾಬಿ ಹಸಿರು ಬಣ್ಣದ ಸಂಯೋಜನೆಯಿಂದ ಕಂಗೊಳಿಸುತ್ತಿದ್ದರೆ, ಕೆಳಗೆ ರೈಲು ಓಡಾಡುತ್ತಿದ್ದು, ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ರೈಲ್ವೆ ಅಧಿಕಾರಿ ಅನಂತ್ ರುಪನಗುಡಿ ಅವರು ಕೂಡ ಈ ವಿಡಿಯೋವನ್ನು ರಿಟ್ವಿಟ್ ಮಾಡಿಕೊಂಡಿದ್ದು, ಬೆಂಗಳೂರಿನ ಸುಂದರವಾದ ಚೆರ್ರಿ ಹೂವುಗಳ ನಡುವೆ ರೈಲ್ವೆಯ ಸುಂದರ ವೈಮಾನಿಕ ದೃಶ್ಯ ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನವರಿಯಿಂದಲೇ ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಹೂ ಬಿಡಲು ಶುರುವಾಗಿ ನಗರಕ್ಕೆ ರಂಗು ನೀಡುತ್ತವೆ. ತಬೆಬುಯಾ ಹೆಸರಿನ ಈ ಹೂಗಳು, ಪ್ರತಿ ವರ್ಷ ವಸಂತಕಾಲದಲ್ಲಿ ಅರಳುತ್ತದೆ.

Leave a Comment

Your email address will not be published. Required fields are marked *