Ad Widget .

ವೀಕೆಂಡ್ ವಿತ್ ರಮೇಶ್ ಸೀಸನ್5| ಮೊದಲ ಅತಿಥಿ ಮೋಹಕತಾರೆ ರಮ್ಯಾ!!

ಸಮಗ್ರ ನ್ಯೂಸ್:ಕರುನಾಡಿನಲ್ಲಿ ಮನೆ ಮಾತಾಗಿದ್ದ ವೀಕೆಂಡ್​ ವಿತ್​ ರಮೇಶ್​ ಸೀಸನ್5 ಕಾರ್ಯಕ್ರಮ ಮತ್ತೊಮ್ಮೆ ಶುರುವಾಗುತ್ತಿದ್ದು, ಮೊದಲ ಗೆಸ್ಟ್‌ ಆಗಿ ಸ್ಯಾಂಡಲ್‌ ವುಡ್‌ ಮೋಹಕತಾರೆ ನಟಿ ರಮ್ಯಾ ಬರಲಿದ್ದಾರೆ ಎಂದು ಜೀ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ.

Ad Widget . Ad Widget .

ಪ್ರೊಮೋ ವಿಡಿಯೋದಲ್ಲಿ. “ವೆಲಕಮ್‌ ಟೂ ವೀಕೆಂಡ್‌ ವಿಥ್‌ ರಮೇಶ್‌ ಸೀಸನ್‌ 5. ಇವತ್ತಿನ ಸಾಧಕರ ಸೀಟ್‌ನಲ್ಲಿ ಕೂರಲಿದ್ದಾರೆ ಮೋಹಕತಾರೆ ರಮ್ಯಾ” ಎಂದು ಪ್ರಾರಂಭಿಸಿದ್ದಾರೆ. ಅದರಲ್ಲಿ ನಟಿ ರಮ್ಯಾ ಅವರ ಆಪ್ತರು ಭಾಗಿಯಾಗಿದ್ದಾರೆ. ಹಾಗೆಯೇ ನಟ ರಮೇಶ್‌ಯೊಂದಿಗೆ ಆಟಗಳನ್ನು ಆಡಿದ್ದಾರೆ. ಆದರೆ ಕೊನೆಯಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ವಿಷಯ ಬಂದಾಗ, ಮೌನವಾಗಿ ಕಣ್ಣಿರಿಟ್ಟಿದ್ದಾರೆ. ಅದನ್ನು ನೋಡಿದ ಅಪ್ಪು ಅಭಿಮಾನಿಗಳು ಭಾವುಕರಾಗಿದ್ದಾರೆ.

Ad Widget . Ad Widget .

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸಾಧಕರ ಕುರ್ಚಿಯಲ್ಲಿ ಕುಳ್ಳಿರಿಸಿ ಅವರು ನಡೆದು ಬಂದ ಹಾದಿ, ಸವೆಸಿದ ಕಷ್ಟಗಳು, ಅವಮಾನ, ಅಪಮಾನ, ಸಾಧನೆ, ಸನ್ಮಾನ ಹೀಗೆ ಪ್ರತಿಯೊಂದು ವಿಚಾರಗಳ ಬಗ್ಗೆಯೂ ಮಾತನಾಡುವ ಈ ಶೋ ಸಾಕಷ್ಟು ಪ್ರತೀತಿಯನ್ನು ಗಳಿಸಿದೆ. ಈ ಕಾರ್ಯಕ್ರಮದ ಮೂಲಕ ಯುವ ಜನಕ್ಕೆ ಸ್ಪೂರ್ತಿಯನ್ನು ತುಂಬುವ ಚಂದನವನದ ನಟ ರಮೇಶ್​ ಇದೀಗ ಮತ್ತೊಮ್ಮೆ ವೀಕೆಂಟ್​ ಟೆಂಟ್​ಗೆ ರೀ ಎಂಟ್ರಿ ಕೊಟ್ಟಿದ್ದಾರೆ.

Leave a Comment

Your email address will not be published. Required fields are marked *