ಸಮಗ್ರ ನ್ಯೂಸ್: ವೇಗದ ಚಾಲನೆಯಿಂದ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಬಿಟ್ಟು ಗುಡ್ಡ ಏರಿ ಪಲ್ಟಿಯಾದ ಘಟನೆ ಮಾ. 21 ರ ಸಂಜೆ ಮಾಣಿ – ಮೈಸೂರು ರಾ.ಹೆದ್ದಾರಿಯ ಅಡ್ಕಾರ್ ಬಳಿ ಸಂಭವಿಸಿದೆ.

ಕಾರಿನಲ್ಲಿ 4 ಜನ ಪ್ರಯಾಣಿಕರು ಇದ್ದು ಕಾಸರಗೋಡಿನಿಂದ ಸುಳ್ಯ ಕಡೆಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಲ್ಲಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.