Ad Widget .

ಸುರತ್ಕಲ್: “ಯುವಶಕ್ತಿಯ ಸಮಾಜಪರ ಕಾಳಜಿಯನ್ನು ಬೆಂಬಲಿಸಬೇಕಿದೆ”
-ಇನಾಯತ್ ಅಲಿ

ಸಮಗ್ರ ನ್ಯೂಸ್: ಸೇವಾಶಿಖರ್ ಫೌಂಡೇಶನ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಮಂಗಳೂರು ತಾಲೂಕು ಕಬಡ್ಡಿ ಅಸೋಸಿಯೇಷನ್ ಇದರ ಸಹಯೋಗದಲ್ಲಿ “ಕುಡ್ಲ ಕಬಡ್ಡಿ-2023” ಕ್ರೀಡಾಕೂಟ ಇತ್ತೀಚಿಗೆ ನಡೆಯಿತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಮಾರೋಪ ಸಮಾರಂಭದಲ್ಲಿ ಮಾತಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು, “ಯುವಜನರು ಸೇವಾಶಿಖರ್ ನಂತಹ ಸಂಘಟನೆಯನ್ನು ಕಟ್ಟಿಕೊಂಡು ನಶಿಸುತ್ತಿರುವ ಕಬಡ್ಡಿಯಂತಹ ಗ್ರಾಮೀಣ ಕ್ರೀಡೆಯನ್ನು ಇನ್ನಷ್ಟು ಬೆಳೆಸಲು ಪಣ ತೊಡಬೇಕು.

Ad Widget . Ad Widget . Ad Widget .

ಸಮಾಜ ಸೇವೆಯಲ್ಲಿ ಹೆಸರು ಪಡೆದಿರುವ ಸಂಘಟನೆಗೆ ನಾವೆಲ್ಲರೂ ಬೆಂಬಲ ನೀಡಬೇಕು” ಎಂದರು. ಕ್ಯಾಪ್ಟನ್ ಬೃಜೇಶ್ ಚೌಟ ಮಾತನಾಡಿ, “ಸೇವಾಶಿಖರ್ ಸಂಘಟನೆ ಕೇವಲ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳದೆ ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಸ್ಕಾಲರ್ ಶಿಪ್, ಆರ್ಥಿಕ ನೆರವು ನೀಡುತ್ತಾ ಬಂದಿದೆ. ಈ ಮೂಲಕ ಮಾದರಿ ಸಂಘಟನೆಯಾಗಿ ಬೆಳೆದಿದೆ” ಎಂದರು.

ವೇದಿಕೆಯಲ್ಲಿ ಆಶಾಜ್ಯೋತಿ ರೈ ಮಾಲಾಡಿ, ಮಾಸ್ಟರ್ ಟ್ರಾವೆಲ್ಸ್ ಮಾಲಕ ಶಬೀರ್ ನವಾಬ್, ಸಚಿನ್ ಶೆಟ್ಟಿ, ಸುಜಿತ್ ಪ್ರತಾಪ್, ಪ್ರೀತಮ್ ರೈ, ಲೋಕೇಶ್ ಶೆಟ್ಟಿ ಕೊಡೆತ್ತೂರು, ಗೋಲ್ಡ್ ಫಿಂಚ್ ನ ಪ್ರಸಾದ್ ಕುಮಾರ್ ಶೆಟ್ಟಿ, ಸೇವಾ ಶಿಖರ್ ಮೆನೇಜಿಂಗ್ ಟ್ರಷ್ಟಿ ವರುಣ್ ಶೇಣವ ಮತ್ತಿತರರು ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ತತ್ವಮಸಿ ಬಗಂಬಿಲ ತಂಡ ಪ್ರಥಮ ಸ್ಥಾನ ಹಾಗೂ ಎಸ್ ಡಿಎಂ ಉಜಿರೆ ದ್ವಿತೀಯ ಸ್ಥಾನ ಗೆದ್ದುಕೊಂಡಿತು.

Leave a Comment

Your email address will not be published. Required fields are marked *