Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ನಿತ್ಯ ಜೀವನದಲ್ಲಿ ರಾಶಿಗಳ ಚಲನೆಯು ಪ್ರಭಾವ ಬೀರುತ್ತದೆ. ಇದೇ ಕಾರಣದಿಂದ ನಾವು ನಿತ್ಯ ಮಾಡುವ ಕರ್ಮಗಳಲ್ಲಿ ಯಶಸ್ಸು ಅಥವಾ ತೊಂದರೆಯನ್ನು ಕಾಣುತ್ತೇವೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಲಾಗುತ್ತದೆ. ರಾಶಿ ಹಾಗೂ ನಕ್ಷತ್ರಗಳ ಚಲನೆಯಿಂದ ನಮ್ಮ ದೈನಂದಿನ ಕಾರ್ಯಗಳು ಸಾಗುತ್ತವೆ. ಈ ವಾರ ಯಾವ ರಾಶಿಗೆ ಯಾವ ಫಲ, ಯಾವ ರಾಶಿಗೆ ಶುಭ? ತಿಳಿಯೋಣ ಬನ್ನಿ…

Ad Widget . Ad Widget .

ಮೇಷ: ಇದೇ ಬುಧವಾರದಂದು ನೂತನ ವರ್ಷ ಆರಂಭವಾಗುವ ಸಮಯ. ಸಿಹಿ ಕಹಿ ಮಿಶ್ರಿತ ಫಲ ಹೊಂದಿರುವ ಮೇಷ ರಾಶಿಯವರು, ಇದೇ ಏಪ್ರಿಲ್ 21ರವರೆಗೂ ದ್ವಾದಶ ಗುರುವಿನ ಬೇವಿನ ಕಹಿಯನ್ನು ಸುಧಾರಿಸಿಕೊಂಡು ಏಕಾದಶದಲ್ಲಿ ಇರುವ ಶನಿಯಿಂದ ಉಂಟಾಗುವ ಬೆಲ್ಲದಂತಹ ಶುಭ ಫಲಗಳನ್ನು ಉಪಯೋಗಿಸಿಕೊಂಡು ಸಂತಸದ ದಿನಗಳ ನಿರೀಕ್ಷೆಯಲ್ಲಿರಿ. ಲಗ್ನದಲ್ಲಿರುವ ರಾಹುವಿಗಾಗಿ ಸುಬ್ರಹ್ಮಣ್ಯನ ಪ್ರಾರ್ಥನೆ ಇರಲಿ.

Ad Widget . Ad Widget .

ವೃಷಭ: ಹೊಸ ಸಂವತ್ಸರವು ನಿಮಗೆ ಸಂತಸ ತರಲೆಂದೆ ಬಂದಿದೆ. ಇನ್ನೂ ಒಂದು ತಿಂಗಳ ಕಾಲ ಗುರುವು ಏಕಾದಶದಲ್ಲಿ ಇದ್ದು, ನೀವು ಬೇಡಿದ್ದನ್ನು ಕೊಡುವ ಕಾಲ. ರಾಶ್ಯಾಧಿಪತಿ ಶುಕ್ರನು ಸಂವತ್ಸರದ ಮಂತ್ರಿಯಾಗಿದ್ದು, ಸಂಸಾರದಲ್ಲಿ ಹೆಚ್ಚಿನ ಸುಖವನ್ನು ಕಾಣುತ್ತೀರಿ. ಹೆಣ್ಣುಮಕ್ಕಳಿಗೆ ಮನಸ್ಸಿಗೆ ನೋವಾಗದಂತೆ ನಡೆದರೆ ದುರ್ಗೆಯು ನಿಮ್ಮನ್ನು ರಕ್ಷಿಸುತ್ತಾಳೆ.

ಮಿಥುನ: ರಾಶ್ಯಾಧಿಪತಿ ಬುಧನು ನೂತನ ಸಂವತ್ಸರದ ರಾಜನಾಗಿ ರುವುದರಿಂದ ದೇವರು ಪ್ರತ್ಯಕ್ಷ ಭೂಲೋಕಕ್ಕೆ ಬಂದು, ಕಾಣದಂತೆ ಮನುಷ್ಯನಿಗೆ ಅಭಿವೃದ್ಧಿ ಕೊಡುವ ಕಾಲವಿದು. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ಪಾಲಿಸುವ ದೈವವು ಮಾಯ ಸ್ವರೂಪಿ ಆಗಿದೆ. ಏಪ್ರಿಲ್​ನಲ್ಲಿ ಗುರು ಏಕಾದಶಕ್ಕೆ ಬರುತ್ತಾನೆ. ಒಂಬತ್ತರ ಶನಿ ಶುಭ ನೀಡುತ್ತಾನೆ.

ಕಟಕ: ಊಟ ಮಾಡುವುದು ಹೊಟ್ಟೆ ತುಂಬುವುದಕ್ಕಾಗಿ. ಮನಸ್ಸಿನ ಕ್ಲೇಶವನ್ನು ಸಂಕಲ್ಪ ಈಡೇರಿಸಲು ದುರ್ಬುದ್ಧಿ ದೂರ ಮಾಡಿಕೊಂಡರೆ ದೇವರು ಕೊಟ್ಟಿರುವ ಸದ್ಬುದ್ಧಿಯಿಂದ ಕಾರ್ಯ ಸಾಗುವುದು. ಈ ಸಂವತ್ಸರ ಅನುಕೂಲಕರವಾಗಿದ್ದು, ಒಳ್ಳೆಯ ಫಲಗಳನ್ನು ಕಾಣುತ್ತೀರಿ.

ಸಿಂಹ: ಸಿಂಹ ರಾಶಿಯ ಅಧಿಪತಿ ಸೂರ್ಯ. ಸೂರ್ಯ ಮತ್ತು ಬುಧ ಮಿತ್ರರು. ಮಿತ್ರತ್ವ ಹೊಂದಿರುವ ಬುಧನು ಈ ಸಂವತ್ಸರದ ಅಧಿಪತಿ ಆಗಿರುವುದರಿಂದ ಸೂರ್ಯನನ್ನು ಪೂಜಿಸಿ. ವಿಷ್ಣುವಿನ ಆರಾಧನೆ ಖಂಡಿತವಾಗಿ ಮಾಡಲೇಬೇಕು. ದಶಾವತಾರಗಳಲ್ಲಿ ಯಾವ ಅವತಾರವನ್ನು ಪೂಜಿಸಿದರೂ ವಿಷ್ಣುವನ್ನು ಪೂಜಿಸಿದ ಫಲವೇ ಸಿಗುತ್ತದೆ.

ಕನ್ಯಾ: ಈ ರಾಶಿಯ ಅಧಿಪತಿ ಬುಧನು ಸಂವತ್ಸರದ ನಾಯಕನೂ ಹೌದು. ನೀವು ಪೂಜಿಸಬೇಕಾದ ಏಕೈಕ ದೇವರು ಮಹಾ ವಿಷ್ಣು. ಶನಿ 6ರಲ್ಲಿ ಇದ್ದು, ಗುರು 7ರಲ್ಲೂ ಇರುವುದರಿಂದ ಸಮಯ ಚೆನ್ನಾಗಿದ್ದು, ಉಪಕಾರ ಮಾಡಿದವನಿಗೆ ದೇವರು ಯಾವ ಆಪತ್ತನ್ನೂ ತರುವುದಿಲ್ಲ. ಅನಂತ ಪದ್ಮನಾಭನನ್ನು ಪೂಜಿಸಿ. ಅನಂತನ ವ್ರತಕತೆಯನ್ನು ಶ್ರವಣ ಮಾಡಿ.

ತುಲಾ: ಗುರುವು ಇನ್ನು ಒಂದೇ ತಿಂಗಳಲ್ಲಿ ಸಪ್ತಮಕ್ಕೆ ಬರುವುದರಿಂದ, ಗ್ರಹಗಳ ಶುಭ ಫಲ ಆರಂಭ ಆಗಿ, ಹೊಸ ವಿಷಯ, ನೂತನ ವಸ್ತ್ರ, ವಾಹನ, ಜಾಗ ಖರೀದಿ ಮಾಡಲು ಸೂಕ್ತ ಸಮಯ. ಮಾಡುವ ಕೆಲಸಗಳಲ್ಲಿ ಯಶಸ್ಸು, ಗೌರವ, ಮನ್ನಣೆ ಸಿಗುವುದರಲ್ಲಿ ಸಂದೇಹವಿಲ್ಲ. ಇಷ್ಟಾರ್ಥ ಸಿದ್ಧಿಗಾಗಿ ದುರ್ಗಾ ಸಹಸ್ರನಾಮ ಪಾರಾಯಣ ಮಾಡಿರಿ.

ವೃಶ್ಚಿಕ: ಕೊಟ್ಟ ಮಾತು ನಡೆಸದೆ ಇರುವುದು ಕೆಟ್ಟ ಆಲೋಚನೆ ಮನಸ್ಸಿಗೆ ತುಂಬುವುದು ಎರಡೂ ನಕಾರಾತ್ಮಕ ಸೂಚನೆ ಆಗಿ ನಿಮ್ಮನ್ನೇ ಹಿಂಡುತ್ತದೆ. ಇಂತಹ ಚಿಂತನೆಯನ್ನು ಬಿಟ್ಟು ಪಂಚಮದಲ್ಲಿ ಇರುವ ಗುರುವಿಗೆ ದತ್ತಾತ್ರೇಯನನ್ನು ಪೂಜಿಸಿ. ಗುರು ಚರಿತ್ರೆ ಹದಿನಾಲ್ಕನೇ ಅಧ್ಯಾಯವನ್ನು ಪಾರಾಯಣ ಮಾಡಿ. ಗಣಪತಿ ಪೂಜೆ ಮಾಡಿದರೆ ಆಗಬೇಕಾದ ಕೆಲಸಗಳು ಮುಂದೆ ಸಾಗುತ್ತವೆ.

ಧನುಸ್ಸು: ರಾಶಿಯವರಿಗೆ ಶನಿಯ ಬಲ ಪರಿಪೂರ್ಣ ಇದ್ದು ಕೆಲಸದಲ್ಲಿ ಜಯ, ಉತ್ಸಾಹ ಮೂಡಿಬರುತ್ತದೆ. ಚತುರ್ಥದಲ್ಲಿ ಗುರು ಇರುವುದರಿಂದ ಕೆಲವೊಂದು ಕ್ಷೇತ್ರದಲ್ಲಿ ಹಿನ್ನಡೆ ಉಂಟಾದರೂ ಮುಂದಿನ ದಿನದಲ್ಲಿ ದ್ವಿಗುಣವಾಗಿ ಕೀರ್ತಿಯನ್ನು ಕೊಟ್ಟು ರಕ್ಷಿಸುತ್ತದೆ. ನಿಮ್ಮ ಆರೋಗ್ಯದ ರಕ್ಷಣೆಗೆ ರಾಮ ರಕ್ಷಾ ಕವಚ ಪಾರಾಯಣ ಮಾಡಿದರೆ ಕಾರ್ಯಸಿದ್ಧಿಯಾಗುತ್ತದೆ.

ಮಕರ: ರಾಶ್ಯಾಧಿಪತಿ ಶನಿ 2ರಲ್ಲಿ ಇದ್ದು, ಮೂರರಲ್ಲಿ ಗುರು ಇದ್ದಾನೆ. ಸಮಯವು ತುಂಬಾ ವಿಶೇಷ ಫಲ ಕೊಡದಿದ್ದರೂ ನಿಮ್ಮ ಜೀವನ ನಡೆಸುವುದಕ್ಕೆ ಯಾವ ತೊಂದರೆ ಇರುವುದಿಲ್ಲ. ಗುರುವು ಅನುಕೂಲ ಮಾಡುತ್ತಾನೆ. ಗುರು ಪರಂಪರೆ ಸ್ತೋತ್ರವನ್ನು ನಿತ್ಯವೂ ಪಠಿಸಿದರೆ ಈ ವರ್ಷದಲ್ಲಿ ನಿಮ್ಮ ಹಾದಿಯನ್ನು ಸುಖವಾಗಿ ದಾಟಿಸುತ್ತಾನೆ.

ಕುಂಭ: ಜನ್ಮ ಶನಿ, ದ್ವಿತೀಯದಲ್ಲಿ ಗುರು ಇದ್ದಾರೆ. ಗುರುವೊಬ್ಬ ಸಾಕು ನಿಮ್ಮನ್ನು ಸಂರಕ್ಷಿಸಲು. ಅಡೆತಡೆಗಳು ಇದ್ದು ಮಾಡುವ ಕೆಲಸ ನಿಧಾನ ಆಗಬಹುದು. ಆದರೆ, ನೀವು ಮಾಡುವ ಕೆಲಸ ವ್ಯರ್ಥ ಆಗುವುದಿಲ್ಲ. ಬರುವ ಧನವು ಸಿಕ್ಕೇ ಸಿಗುತ್ತದೆ. ಶನಿ ಅಷ್ಟೋತ್ತರ ಪಾರಾಯಣ ಮಾಡಿ. ಪಾರ್ವತಿ ಸಹಿತ ಸಾಂಬಸದಾಶಿವನನ್ನು ಪ್ರಾರ್ಥಿಸಿದರೆ ಶುಭವಾಗುತ್ತದೆ.

ಮೀನ: ರಾಶಿಯವರಿಗೆ ದ್ವಾದಶದಲ್ಲಿ ಶನಿ ಇರುವುದರಿಂದ ಕೆಲವೊಂದು ಘಟನೆ ನಡೆದು ಅಲ್ಲೋಲ ಕಲ್ಲೋಲ ಸೃಷ್ಟಿ ಆಗಬಹುದು. ನರಸಿಂಹನಿಗೆ ತುಪ್ಪದ ದೀಪ ಬೆಳಗಿದಲ್ಲಿ ನಿಮ್ಮ ದಾರಿಯಲ್ಲಿರುವ ಕತ್ತಲು ದೂರವಾಗಿ ಜೀವನದ ಬೆಳಕು ಹೊರಹೊಮ್ಮುತ್ತದೆ. ನಂಜನಗೂಡಿನಲ್ಲಿ ನೆಲೆಸಿರುವ ಶ್ರೀಕಂಠೇಶ್ವರನನ್ನು ಆರಾಧಿಸಿ. ಶನಿಯ ಸಂಚಾರದಲ್ಲಿ, ಶನಿಯ ಸೃಷ್ಟಿಕರ್ತ ದೇವರ ಮಹಾದೇವರಾದ ಈಶ್ವರನನ್ನು ಯಾವ ರೂಪದಲ್ಲಿ ಪೂಜಿಸಿದರೂ ನಿಮಗೆ ಅನುಕೂಲ ಆಗುತ್ತದೆ.

Leave a Comment

Your email address will not be published. Required fields are marked *