ಸಮಗ್ರ ನ್ಯೂಸ್: ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಣಿಮಿಣಿಕೆ ಟೋಲ್ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಒನ್‌ವೇನಲ್ಲಿ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ರಾಜರಾಜೇಶ್ವರಿ ಆಸ್ಪತ್ರೆ ಬಳಿ ಬೈಕ್‌ಗೆ ಗುದ್ದಿದ್ದು, ಓರ್ವ ಬೈಕ್ ಸವಾರ ಸಾವನ್ನಪ್ಪಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಅವಾಂತರದಲ್ಲಿ ಈಗಾಗಲೇ 85ಕ್ಕೂ ಅಧಿಕ ಅಪಘಾತಗಳು ಸಂಭವಿಸಿವೆ. ಆದರೆ, ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸರ್ವಿಸ್ ರಸ್ತೆಯನ್ನು ಸಮರ್ಪಕವಾಗಿ ನಿರ್ಮಾಣ ಮಾಡಿಲ್ಲ. ಆದ್ದರಿಂದ ವಾಹನ ಸವಾರರು ಪರದಾಡುತ್ತಿದ್ದು, ಎಲ್ಲಿ ಸರ್ವಿಸ್ ರಸ್ತೆಯಿದೆ, ಎಲ್ಲಿ ಟೋಲ್ ರಸ್ತೆಯಿದೆ ಎಂಬುದು ಗೊತ್ತಾಗದೆ ಪರದಾಡುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಹೋಗುವ ವಾಹನಗಳಿಗೆ ಭಾರಿ ಅನಾನುಕೂಲ ಉಂಟಾಗುತ್ತಿದೆ. ಈಗ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೂ ಕೂಡ ಹೆದ್ದಾರಿ ಪ್ರಾಧಿಕಾರದ ಎಡವಟ್ಟು ಕಾರಣವಾಗಿದೆ ಎಂಬುದು ಕಂಡುಬರುತ್ತಿದೆ.
ಇಂದು ಬೆಳಗ್ಗೆ ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್ ಸರ್ವಿಸ್ ರಸ್ತೆಯ ಫಲಕ ಅಥವಾ ಮಾಹಿತಿ ಇಲ್ಲದ್ದರಿಂದ ಕಣಿಮಿಣಿಕೆ ಟೋಲ್‌ಗೇಟ್ ಇರುತ್ತ ಸಾಗಿದ್ದಾರೆ. ಆದರೆ, ಅಲ್ಲಿ ಟೋಲ್ ಕಟ್ಟದ ವಾಹನಗಳಿಗೆ ಪ್ರವೇಶ ಇಲ್ಲದ್ದರಿಂದ ಪುನಃ ಅದೇ ರಸ್ತೆಯಲ್ಲಿ ಒನ್‌ವೇ ಮೂಲಕ ಬಸ್ ಅನ್ನು ವಾಪಸ್ ತೆಗೆದುಕೊಂಡು ಹೋಬೇಕಿತ್ತು. ಬಸ್‌ನ ಚಾಲಕ ಒನ್‌ವೇನಲ್ಲಿ ಬರುತ್ತಿದ್ದ ವಾಹನಗಳನ್ನು ಲೆಕ್ಕಿಸದೇ ಸರ್ವಿಸ್ ರಸ್ತೆಗೆ ಹೋಗಲು ವಾಪಸ್ ಬರುವಾಗ ಬೈಕ್‌ಗೆ ಗುದ್ದಿದೆ. ಇನ್ನು ಬೈಕ್‌ನಲ್ಲಿ ಇಬ್ಬರು ಸವಾರರಿದ್ದು ಒಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.