Ad Widget .

ಅಮೇರಿಕಾ ದೇಶಕ್ಕೂ ವಂಚಿಸಿದ ನಿತ್ಯಾನಂದ| ಕಪೋಲ‌ಕಲ್ಪಿತ ಕೈಲಾಸವಾಸಿಯ(!) ಮತ್ತೊಂದು ಮುಖವಾಡ ಬಯಲು

ಸಮಗ್ರ ನ್ಯೂಸ್: ಕರ್ನಾಟಕದ ಬಿಡದಿಯ ಆಶ್ರಮದಿಂದ ಪರಾರಿಯಾಗಿ ತನ್ನದೇ ಆದ ವಿಶ್ವದ ಪ್ರಥಮ ಹಿಂದೂ ರಾಷ್ಟ್ರ ಕೈಲಾಸ ದೇಶವನ್ನು ಸ್ಥಾಪಿಸಿಕೊಂಡಿದ್ದೇನೆ ಎಂದು ಹೇಳುತ್ತಿರುವ ಸ್ವಾಮಿ ನಿತ್ಯಾನಂದನ ಮತ್ತೊಂದು ವಂಚನೆ ಬಯಲಾಗಿದೆ.

Ad Widget . Ad Widget .

ವಿಶ್ವದಲ್ಲಿ ಅಸ್ತಿತ್ವದಲ್ಲೇ ಇಲ್ಲದ ಕೇವಲ ಕಾಲ್ಪನಿಕವಾಗಿರುವ ಕೈಲಾಸ ದೇಶವನ್ನು ಸ್ವಾಮಿ ನಿತ್ಯಾನಂದ ತನ್ನ ಭಕ್ತಗಣದ ಮೂಲಕ ಅಮೆರಿಕದ 30ಕ್ಕೂ ಅಧಿಕ ನಗರಗಳ ಜೊತೆ ಸಾಂಸ್ಕೃತಿಕ ಸಹಯೋಗ ಒಪ್ಪಂದ ಮಾಡಿಕೊಂಡಿರುವುದು ಈಗ ಬೆಳಕಿಗೆ ಬಂದಿದೆ.

Ad Widget . Ad Widget .

‘ಸಿಸ್ಟರ್ ಸಿಟಿ’ ಎಂದು ಇದಕ್ಕೆ ಆತ ಹೆಸರು ಕೊಟ್ಟಿದ್ದು ನೇವರ್ಕ್, ರಿಚ್ಮಂಡ್, ವರ್ಜೀನಿಯಾ, ಒಹಾಯೋ ಸೇರಿ ಹಲವು ನಗರಗಳ ನಡುವೆ ಈ ಒಪ್ಪಂದ ಏರ್ಪಟ್ಟಿತ್ತು. ಇದೀಗ ಆತನ ಕೈಲಾಸ ದೇಶ ಅಸ್ತಿತ್ವದಲ್ಲಿ ಇಲ್ಲ ಎಂದು ಅರಿವಾಗುತ್ತಲೆ, ನೇವರ್ಕ್ ನಗರ ಒಪ್ಪಂದವನ್ನು ರದ್ದುಗೊಳಿಸಿದೆ. ಇತರೆ ನಗರಗಳು ಸಹ ಇದೇ ಹಾದಿಯನ್ನು ಅನುಸರಿಸಲು ಮುಂದಾಗಿವೆ.

Leave a Comment

Your email address will not be published. Required fields are marked *