Ad Widget .

ಕೊರೊನಾ ವೈರಸ್ ನ ಮೂಲ ಯಾವ್ದು ಗೊತ್ತಾ? ಹೊಸದೊಂದು ವಾದ ಮುಂದಿಟ್ಟ ವಿಜ್ಞಾನಿಗಳು

ಸಮಗ್ರ ನ್ಯೂಸ್: ಕೊರೊನಾ ವೈರಸ್‌ನ ಮೂಲ ಚೀನ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.ವುಹಾನ್‌ ಮಾರುಕಟ್ಟೆಯಿಂದ 2020ರ ಜನವರಿಯಲ್ಲಿ ಅನುವಂಶಿಕ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಅದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಇಲ್ಲಿ ಮಾರಾಟ ಮಾಡುತ್ತಿದ್ದ ರಕೂನ್‌ ಪ್ರಾಣಿಯ ಮಾಂಸದಲ್ಲಿ ಸಾರ್ಸ್‌-ಕೊವ್‌-2 ವೈರಸ್‌ ಪತ್ತೆಯಾಗಿದೆ ಎಂದು ಅಂತಾರಾಷ್ಟ್ರೀಯ ತಜ್ಞರ ತಂಡವು ತಿಳಿಸಿದೆ.

Ad Widget . Ad Widget .

ಕೊರೊನಾ ಸ್ಫೋಟದ ಹಿನ್ನೆಲೆಯಲ್ಲಿ 2020ರ ಜನವರಿಯಲ್ಲಿ ಚೀನ ಸರ್ಕಾರ ವುಹಾನ್‌ ಮಾರುಕಟ್ಟೆ ಬಂದ್‌ ಮಾಡಿದ ಕೂಡಲೇ ಸಂಶೋಧಕರು ಅಲ್ಲಿದ್ದ ಗೋಡೆಗಳು, ನೆಲ, ಪ್ರಾಣಿಗಳನ್ನು ಸಾಗಾಟ ಮಾಡುತ್ತಿದ್ದ ಲೋಹದ ಪಂಜರಗಳು, ಬಂಡಿಗಳು, ಉಳಿದ ಮಾಂಸದಿಂದ ಮಾದರಿಗಳನ್ನು ಸಂಗ್ರಹಿಸಿದ್ದರು. ಇದನ್ನು ಅನುವಂಶಿಕ ಪರೀಕ್ಷೆಗೆ ಒಳಪಡಿಸಿ, ಇದರ ಆಧಾರದಲ್ಲಿ ಗುರುವಾರ ವರದಿಯನ್ನು ತಜ್ಞರು ಬಿಡುಗಡೆಗೊಳಿಸಿದ್ದಾರೆ.

Ad Widget . Ad Widget .

ಮಾದರಿಯ ಜೈವಿಕ ಅಂಶವನ್ನು ಪರೀಕ್ಷಿಸಿದಾಗ ಇದು ರಕೂನ್‌ ಪ್ರಾಣಿಗೆ ಸೇರಿರುವುದು ಹಾಗೂ ಇದರಲ್ಲಿ ಕೊರೊನಾ ವೈರಸ್‌ ಇರುವುದು ಬಹಿರಂಗವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ತಜ್ಞರ ತಂಡದಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ, ಅಸ್ಟ್ರೇಲಿಯಾದ ಸಿಡ್ನಿ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ತಜ್ಞರು ಇದ್ದಾರೆ.

ಕಳೆದ ವಾರವಷ್ಟೇ ವುಹಾನ್‌ ವೈರಾಲಜಿ ಪ್ರಯೋಗಾಲಯದಿಂದ ಆಕಸ್ಮಿಕವಾಗಿ ವೈರಸ್‌ ಸೋರಿಕೆಯಾದ ಪರಿಣಾಮ ಜಗತ್ತಿನಾದ್ಯಂತ ಕೊರೊನಾ ಮಾರಿಗೆ ಕಾರಣವಾಯಿತು ಎಂದು ಅಮೆರಿಕ ಪ್ರತಿಪಾದಿಸಿತ್ತು.

ಈ ನಡುವೆ, ಇಸ್ರೇಲ್‌ನಲ್ಲಿ ಕೊರೊನಾ ಸೋಂಕಿನ ಹೊಸ ರೂಪಾಂತರಿಯೊಂದು ಪತ್ತೆಯಾಗಿದೆ. ವಿದೇಶದಿಂದ ಆಗಮಿಸಿದ್ದ ಇಬ್ಬರು ವ್ಯಕ್ತಿಗಳಿಗೆ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಸೋಂಕು ಉಲ್ಬಣಗೊಂಡಾಗ ಈ ಮಾರುಕಟ್ಟೆಯನ್ನು ಮುಚ್ಚಲಾಗಿತ್ತು. ಹೀಗೆ ಸಂಗ್ರಹಿಸಲಾದ ಒಂದು ಸ್ಯಾಂಪಲ್ ರಕೂನ್ ನಾಯಿಗಳದ್ದಾಗಿದ್ದು, ಇದರಲ್ಲಿ ಸೋಂಕಿತ ವೈರಸ್ ಕಂಡು ಬಂದಿದೆ. ಹೆಚ್ಚಿನ ಪ್ರಮಾಣದ ಅನುವಂಶಿಕ ವಸ್ತುಗಳು ರಕೂನ್ ನಾಯಿಗೆ ಹೊಂದಿಕೆಯಾಗುತ್ತವೆ. ಈ ಸಂಶೋಧನೆಯು, ಕೋವಿಡ್ ಸೋಂಕು ಕಾಡು ಪ್ರಾಣಿಗಳಿಂದ ಮನುಷ್ಯನಿಗೆ ಹರಡಿರುವ ಸಾಧ್ಯತೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಮಾರುಕಟ್ಟೆಯಲ್ಲಿನ ಪ್ರಾಣಿಗಳು ಸೋಂಕು ಪೀಡಿತವಾಗಿರುವುದನ್ನು ಇದು ಬಲವಾಗಿ ಸೂಚಿಸಿದೆ ಎಂದು ಸಂಶೋಧಕರ ತಂಡದಲ್ಲಿದ್ದ ವಿಜ್ಞಾನಿ ಏಂಜೆಲಾ ರಸ್ಮುಸೆನ್ ಹೇಳಿದ್ದಾರೆ.

ರಕೂನ್ ನಾಯಿಗಳು ನರಿಗಳ ಜೊತೆ ಅನುವಂಶಿಕ ಸಂಬಂಧ ಹೊಂದಿವೆ ಮತ್ತು ಕೊರೊನಾ ವೈರಸ್ ಹರಡಲು ಸಮರ್ಥವಾಗಿವೆ ಎಂದು ತಿಳಿದು ಬಂದಿದೆ. ಈ ಮಾದರಿಗಳಲ್ಲಿ ಕನಿಷ್ಠ ಒಂದರಲ್ಲಿ ವೈರಸ್ ನ್ಯೂಕ್ಲಿಯಿಕ್ ಆಮ್ಲವಿದೆ. ಸಾಕಷ್ಟು ರಕೂನ್ ನಾಯಿಗಳಲ್ಲಿಯೂ ಅದೇ ತರಹದ ನ್ಯೂಕ್ಲಿಯಿಕ್ ಆಮ್ಲವಿದೆ ಎಂದು ನಾವು ತುಲನಾತ್ಮಕವಾಗಿ ಕಂಡು ಹಿಡಿಯಲು ಸಾಧ್ಯವಾಯಿತು ಎಂದು ಉತಾಹ್ ವಿಶ್ವವಿದ್ಯಾನಿಲಯದ ವೈರಾಲಜಿಸ್ಟ್ ಸ್ಟೀಫನ್ ಗೋಲ್ಡ್‌ಸ್ಟೈನ್ ವಿಶ್ಲೇಷಣೆ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಆದಾಗ್ಯೂ, ತಂಡ ವೈರಸ್ ಮತ್ತು ಪ್ರಾಣಿಯ ಆನುವಂಶಿಕ ವಸ್ತುಗಳು ತುಲನಾತ್ಮಕವಾಗಿ ಒಂದೇ ಎಂಬುದು ಕಂಡು ಬಂದರೂ ರಕೂನ್ ನಾಯಿ ಸ್ವತಃ ಸೋಂಕಿಗೆ ಒಳಗಾಗಿದೆ ಎಂಬುದನ್ನು ಅದು ಸಾಬೀತು ಪಡಿಸುವುದಿಲ್ಲ. ರಕೂನ್ ನಾಯಿ ಸೋಂಕಿಗೆ ಒಳಗಾಗಿದ್ದರೂ ನಾಯಿಯಿಂದಲೇ ಜನರಿಗೆ ವೈರಸ್‌ ಹರಡಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಮತ್ತೊಂದು ಪ್ರಾಣಿಯು ಜನರಿಗೆ ವೈರಸ್ ಅನ್ನು ರವಾನಿಸಿರಬಹುದು ಅಥವಾ ವೈರಸ್ ಸೋಂಕಿತ ಯಾರಾದರೂ ರಕೂನ್ ನಾಯಿಗೆ ವೈರಸ್ ಅನ್ನು ಹರಡಿರಲೂಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

Leave a Comment

Your email address will not be published. Required fields are marked *