Ad Widget .

ಮಡಿಕೇರಿ: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯನ್ನು ಕರೆದೊಯ್ದು ಅತ್ಯಾಚಾರ| ಆರೋಪಿಯ ಬಂಧನ

ಸಮಗ್ರ ನ್ಯೂಸ್:ಬಾರ್‌ವೊಂದರಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ 48 ವರ್ಷದ ಮಹಿಳೆಯೊಬ್ಬರ ಮೇಲೆ ಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಕೊಡಗಿನ ಗೋಣಿಕೊಪ್ಪಲು ನಲ್ಲಿ ನಡೆದಿದೆ. ಆರೋಪಿಯನ್ನು ವ್ಯಾನ್‌ ಚಾಲಕ ಮಣಿಕಂಠ (39) ಎಂದು ಗುರುತಿಸಲಾಗಿದೆ.

Ad Widget . Ad Widget .

‘ಮಹಿಳೆಯು ಭಾನುವಾರ ಸಂಜೆ ಮದ್ಯದಂಗಡಿಯಲ್ಲಿ ಕೆಲಸ ಮುಗಿಸಿ ವಾಪಸ್ ತಮ್ಮ ಊರಿಗೆ ತೆರಳಲು ಬಸ್‌ನಿಲ್ದಾಣದ ಬಳಿ ನಿಂತಿದ್ದಾಗ ಮಾರುತಿ ಓಮ್ನಿ ವ್ಯಾನ್‌ನಲ್ಲಿ ಬಂದ ಆರೋಪಿಯು ಡ್ರಾಪ್‌ ಕೊಡುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದಲ್ಲದೇ ಮೊಬೈಲ್‌ ನಂಬರ್‌ನ್ನು ವಿನಿಮಯ ಮಾಡಿಕೊಂಡು, ತಾನು ಕರೆದಾಗ ಬರಬೇಕು ಎಂದೂ ಧಮಕಿ ಹಾಕಿದ್ದಾನೆ.

Ad Widget . Ad Widget .

ಘಟನೆಯಿಂದ ಆಘಾತಕ್ಕೆ ಒಳಗಾದ ಮಹಿಳೆಯು ಮೂರು ದಿನಗಳ ಕಾಲ ಕೆಲಸಕ್ಕೆ ಬಂದಿರಲಿಲ್ಲ. ಗುರುವಾರ ಕೆಲಸಕ್ಕೆ ಬಂದಾಗ ಬಾರ್‌ನ ಮಾಲೀಕರು ವಿಚಾರಿಸಿದಾಗ ಮಹಿಳೆ ಅತ್ಯಾಚಾರದ ಘಟನೆ ಕುರಿತು ಹೇಳಿದ್ದಾರೆ. ಮಾಲೀಕರು ಕೂಡಲೇ ಪೊಲೀಸರಿಗೆ ದೂರು ನೀಡುವಂತೆ ತಿಳಿಸಿದ ನಂತರವಷ್ಟೇ ಮಹಿಳೆ ಪೊಲೀಸ್ ಠಾಣೆಗೆ ಬಂದರು. ಆರೋಪಿ ಮಹಿಳೆಗೆ ನೀಡಿದ್ದ ಮೊಬೈಲ್‌ ನಂಬರ್‌ನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *