Ad Widget .

ದಿಢೀರ್ ದೆಹಲಿಗೆ ಹಾರಿದ ಸುಳ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಜಿ.ಕೃಷ್ಣಪ್ಪ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಚುನಾವಣೆಗೆ ಭರ್ಜರಿ ತಯಾರಿಗಳು ನಡೆಯುತ್ತಿದೆ. ಹೈಕಮಾಂಡ್ ಪಕ್ಷವನ್ನು ಗೆಲ್ಲಿಸಲು ಜನ ಮ‌ನವೊಲಿಸಲು ಮುಂದಾದರೆ ಇನ್ನೊಂದು ಕಡೆ ಟಿಕೆಟ್ ಆಕಾಂಕ್ಷಿಗಳು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಕೆಲವರ ಹೆಸರುಗಳು ಕೇಳಿ ಬಂದಿದ್ದು ಇನ್ನು ಕೆಲವರು ಸದ್ದಿಲ್ಲದೆ ಹೈಕಮಾಂಡ್ ಬಾಗಿಲಲ್ಲಿ ಸಾಲು ನಿಂತಿರುವುದು ಪರದೆಯ ಹಿಂದೆ ಕಾಣುವ ನೆರಳಿನಂತಿದೆ.

Ad Widget . Ad Widget .

ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಹೆಸರು ಕೇಳಿ ಬಂದಿದ್ದು ಇಬ್ಬರಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗಲಿದೆ ಎಂಬುದು ಕುತೂಹಲವಾಗಿದೆ. ಈ ಮಧ್ಯೆ ಜಿ. ಕೃಷ್ಣಪ್ಪ ರವರ ಹೆಸರು ಈಗಾಗಲೇ ಮುಂಚೂಣಿಯಲ್ಲಿರುವುದು ಡಾ. ಹೆಚ್.ಎಂ ನಂದಕುಮಾರ್ ಗೆ ತಲೆ ನೋವಾಗಿರುವುದು ಸುಳ್ಳಲ್ಲ.

Ad Widget . Ad Widget .

ಈ ಬಾರಿ ಸುಳ್ಯದಿಂದ ನಾನೇ ಸ್ವರ್ದಿಸಲಿದ್ದೇನೆ ಎಂದು ಜನರ ನಡುವೆ ಓಡಾಟ ಮಾಡಿದ ನಂದಕುಮಾರ್ ಗೆ ಈ ಸಲ ಟಿಕೆಟ್ ಸಿಗಬಹುದು ಎಂಬ ಮಾತುಗಳು ಕೆಲವು ಕಾರ್ಯಕರ್ತರ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಇದೆಲ್ಲದರ ನಡುವೆ ಜಿ. ಕೃಷ್ಣಪ್ಪ ರವರು ಸುದ್ದಿ ಗದ್ದಲವಿಲ್ಲದೆ ಧಿಡೀರ್ ದೆಹಲಿಗೆ ಹಾರಿರುವುದು ಇದೀಗ ಬಾರಿ ಕುತೂಹಲ ಮೂಡಿಸಿದೆ. ಚುನಾವಣೆಗೆ ಇನ್ನೇನೂ ಕೆಲವೇ ದಿನಗಳಷ್ಟೆ ಬಾಕಿ ಉಳಿದಿರುವುದು. ಅಭ್ಯರ್ಥಿ ಗಳ ಪಟ್ಟಿ ಕೂಡ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಜಿ. ಕೃಷ್ಣಪ್ಪ ರವರು ದೆಹಲಿಯಿಂದ ತಮ್ಮ ಹೆಸರಿನ ಪಟ್ಟಿಯೊಂದಿಗೆ ಆಗಮಿಸುವ ಸಾಧ್ಯೆತೆಯೂ ಬಹಳ ಹೆಚ್ಚಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Leave a Comment

Your email address will not be published. Required fields are marked *