ಸಮಗ್ರ ನ್ಯೂಸ್:ನಗರಸಭಾ ಸದಸ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ.
ನಗರಸಭಾ ಸದಸ್ಯರಾದ ಊರಮಾಲು ನಿವಾಸಿಯಾದ ಶಿವರಾಮ್ ಸಪಲ್ಯ ಮೃತ ವ್ಯಕ್ತಿ ಎಂದು ಎಂದು ಗುರುತಿಸಲಾಗಿದೆ. ಇವರ ಪತ್ನಿ ಹತ್ತಿರ ಮನೆಗೆ ಹೋಗಿ ಮನೆಗೆ ಮರಳುವ ವೇಳೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಪತ್ನಿ ಫೋನ್ ಮಾಡುವ ವೇಳೇ ಫೋನನ್ನು ಸ್ವೀಕರಿಸಲಿಲ್ಲ. ಅನುಮಾನಗೊಂಡ ಪತ್ನಿ ಮನೆಯೊಳಗೆ ತೆರಳಿದಾಗ ಶಿವರಾಮ್ ರವರು ನೇಣು ಬಿಗಿದುಕೊಂಡಿದ್ದರು ಎಂದು ವರದಿಯಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.