Ad Widget .

ಕೊಟ್ಟಿಗೆಹಾರ,ಬಣಕಲ್ ಸುತ್ತಮುತ್ತ ಧಾರಾಕಾರ ಮಳೆ

ಸಮಗ್ರ ನ್ಯೂಸ್: ಬಣಕಲ್, ಕೊಟ್ಟಿಗೆಹಾರ ಸುತ್ತಮುತ್ತ ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Ad Widget . Ad Widget .

ರಾತ್ರಿ 7 ಗಂಟೆಗೆ ಪ್ರಾರಂಭವಾದ ಮಳೆ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಬಣಕಲ್, ಕೊಟ್ಟಿಗೆಹಾರ, ತರುವೆ, ಬಿನ್ನಡಿ, ಅತ್ತಿಗೆರೆ, ಬಗ್ಗಸಗೋಡು, ಫಲ್ಗುಣಿ, ಹೊರಟ್ಟಿ, ಬಿದರಹಳ್ಳಿ ಮುಂತಾದ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.

Ad Widget . Ad Widget .

ಕಾಫಿ ಬೆಳೆಗಾರರು ಮುಂದಿನ ವರ್ಷದ ಪಸಲಿಗಾಗಿ ತೋಟಕ್ಕೆ ನೀರು ಹಾಯಿಸುವ ಸಿದ್ದತೆಯಲ್ಲಿದ್ದರು. ಬಹುತೇಕ ಬೆಳೆಗಾರರು ಕಾಫಿ ತೋಟಕ್ಕೆ ನೀರು ಹಾಯಿಸಿದ್ದರು. ದಿಡೀರ್ ಮಳೆ ಸುರಿದಿರುವುದು ಸಾವಿರಾರು ರೂ ವೆಚ್ಚ ಮಾಡಿ ತೋಟಕ್ಕೆ ನೀರು ಹಾಯಿಸುವುದು ತಪ್ಪಿದಂತಾಗಿದೆ. ಇದರಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಜನರಿಗೆ ಮಳೆಯಿಂದಾಗಿ ತಂಪೆರದಂತಾಗಿದ್ದು ಚಾರ್ಮಾಡಿ ಘಾಟ್‍ನಲ್ಲಿ ಸುರಿದ ಮಳೆಯಿಂದಾಗಿ ಕಾಡ್ಗಿಚ್ಚು ನಿಯಂತ್ರಣಕ್ಕೆ ಬಂದಿದೆ.

Leave a Comment

Your email address will not be published. Required fields are marked *