Ad Widget .

Bengaluru Mysuru Expressway|ನಾನು ಆ ರಸ್ತೆಯಲ್ಲಿ ಬರೋವಾಗ ಶೌಚಾಲಯಕ್ಕೆ ಹೋಗಲು ಅವಕಾಶ ಇರ್ಲಿಲ್ಲ ಡಿ.ಕೆ ಶಿವಕುಮಾರ್

ಸಮಗ್ರ ನ್ಯೂಸ್: ದಶಪಥ ರಸ್ತೆ ಸರಿ ಇಲ್ಲ (Bengaluru Mysuru Expressway) ನಾನು ಆ ರಸ್ತೆಯಲ್ಲಿ ಬರೋವಾಗ ಶೌಚಾಲಯಕ್ಕೆ ಹೋಗ್ಬೇಕು ಅಂದ್ರೆ, ಅವಕಾಶ ಇರ್ಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ವ್ಯಂಗ್ಯವಾಡಿದ್ದಾರೆ.

Ad Widget . Ad Widget .

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ಉದ್ಘಾಟನೆಯೇ ಸರಿಯಿಲ್ಲ. ರಸ್ತೆಯನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಯಮದ ಅನ್ವಯ ಮಾಡಿಲ್ಲ. ರಸ್ತೆ ಗುತ್ತಿಗೆದಾರನೂ ಸರಿಯಾಗಿ ಕೆಲಸ ಮಾಡಿಲ್ಲ. ಈಗಾಗಲೇ 80ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಎಲ್ಲ ಕಡೆ ಅಂಗಡಿಗಳು ಮುಚ್ಚಿಹೋಗಿವೆ. ಸ್ಥಳೀಯರು ಓಡಾಡೋಕೆ ಸರ್ವೀಸ್ ರಸ್ತೆಯೇ ಇಲ್ಲ. ನಾನೇ ಮೊನ್ನೆ ಬರೋವಾಗ ಶೌಚಾಲಯಕ್ಕೆ ನಿಲ್ಲಿಸಲು ಅವಕಾಶ ಇರಲಿಲ್ಲ ಎಂದು ಲೇವಡಿ ಮಾಡಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *