ಸಮಗ್ರ ನ್ಯೂಸ್: ಪತ್ನಿ ರಾತ್ರಿ ಮಲಗಿ ಮಾರನೇ ದಿನ ಮಧ್ಯಾಹ್ನ ಏಳುತ್ತಾಳೆ. ಅಡುಗೆ ಮಾಡು ಎಂದರೆ ಜಗಳ ಮಾಡುತ್ತಾಳೆ. ಕಳೆದ ಐದು ವರ್ಷದಿಂದ ನರಕಯಾತನೆಗೆ ಕಾರಣರಾದ ಪತ್ನಿ ಹಾಗೂ ಆಕೆಯ ತವರು ಮನೆಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವ್ಯಕ್ತಿಯೊಬ್ಬರು ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಸವನಗುಡಿ ನಿವಾಸಿ ಕಮ್ರಾನ್ ಖಾನ್(39) ನೀಡಿದ ದೂರಿನ ಮೇರೆಗೆ ಆತನ ಪತ್ನಿ ಆಯೇಷಾ ಫರೀನ್, ಮಾವ ಆರೀಫ್ ಪಾಷಾ, ಅತ್ತೆ ಹೀನಾ ಕೌಸರ್, ಬಾವಮೈದುನಾ ಮೊಹಮ್ಮದ್ ಮೋಯಿನ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಇಲಿಯಾಜ್ ನಗರದ ಆಯೇಷಾ ಫರೀನ್‌ನನ್ನು 2017ರಲ್ಲಿ ಇಸ್ಲಾಂ ಧರ್ಮದ ಪ್ರಕಾರ ಮದುವೆಯಾಗಿದ್ದೇನೆ. ಈಕೆ ಅನಾರೋಗ್ಯ ಕಾರಣ ಹೇಳಿಕೊಂಡು ರಾತ್ರಿ ಮಲಗಿದರೆ ಮಾರನೇ ದಿನ ಮಧ್ಯಾಹ್ನ 12ಕ್ಕೆ ಏಳುತ್ತಾಳೆ. ಆಕೆಗೆ ಟೈಫಾಯಿಡ್, ಥೈರಾಯಿಡ್, ಕಣ್ಣಿಗೆ ಸಂಬಂಧಿಸಿದ ಖಾಯಿಲೆಗಳು ಇದ್ದು, ಮದುವೆ ಸಮಯದಲ್ಲಿ ಈ ಬಗ್ಗೆ ನನಗೆ ತಿಳಿಸಿಲ್ಲ. ನಾನು ಪ್ರತಿ ದಿನ ಕಚೇರಿಗೆ ಹೋಗುವಾಗ ನನ್ನ ತಾಯಿ ಅಡುಗೆ ಮಾಡಿಕೊಡುತ್ತಾರೆ. ಮಧ್ಯಾಹ್ನ ನಿದ್ದೆಯಿಂದ ಎದ್ದೇಳುವ ಪತ್ನಿ ಸಂಜೆವರೆಗೂ ಕಾಲಹರಣ ಮಾಡಿ ಸಂಜೆ 5ಕ್ಕೆ ಮತ್ತೆ ಮಲಗುತ್ತಾಳೆ. ರಾತ್ರಿ 9.30ಕ್ಕೆ ಎದ್ದು ಊಟ ಮಾಡಿ ಮತ್ತೆ ಮಲಗುತ್ತಾಳೆ’ ಎಂದು ದೂರುದಾರ ಕಮ್ರಾನ್ ಖಾನ್ ಆರೋಪಿಸಿದ್ದಾರೆ.
ರಾಯಲ್ ಲೈಫ್ ಲೀಡ್ ಮಾಡುವ ಉದ್ದೇಶದಿಂದ ತನ್ನನ್ನ ಪತ್ನಿ ಆಯೇಷಾ ಫರ್ಹಿನ್ ಮದ್ವೆಯಾಗಿದ್ದಾಳೆ..ಆಕೆಗೆ ಮದ್ವೆಗೆ ಮುಂಚೆಯೇ ಖಾಯಿಲೆಗಳಿದೆ. ಅದನ್ನ ಮರೆ ಮಾಚಿ ಐದು ವರ್ಷದ ಹಿಂದೆ ನನಗೆ ಆಕೆಯನ್ನ ಮದ್ವೆ ಮಾಡಿಸಿದ್ದಾರೆಂದು ದೂರಿನಲ್ಲಿ ಕಮ್ರಾನ್ ಖಾನ್ ಹೇಳಿದ್ದಾರೆ.
ಹುಟ್ಟುಹಬ್ಬದ ನೆಪದಲ್ಲಿ 20-25 ಜನರನ್ನ ಮನೆಗೆ ಆಹ್ವಾನಿಸಿ ಆ ನೆಪದಲ್ಲಿ ಹಲ್ಲೆ ನಡೆಸಿರುವುದಾಗಿ ಪತಿ ಕಮ್ರಾನ್ ಆರೋಪಿಸಿದ್ದಾನೆ. ಮನೆಯಲ್ಲಿ ಕೆಲಸ ಮಾಡಲು ಹೇಳಿದರೆ ತನ್ನ ಜೊತೆ ಜಗಳವಾಡಿ 15-20 ದಿನ ತವರು ಮನೆಗೆ ಸೇರಿಕೊಳ್ಳುತ್ತಾಳೆ. ತನ್ನ ಬಗ್ಗೆ ಕಿಂಚಿತ್ತೂ ಪ್ರೀತಿ , ಮಮಕಾರ ಇಲ್ಲ, ತನ್ನ ಆಸ್ತಿ ಲಪಟಾಯಿಸಲು, ರಾಯಲ್ ಲೈಫ್ ಲೀಡ್ ಮಾಡಲು ತನ್ನನ್ನ ಮದ್ವೆಯಾಗಿ ಚಿತ್ರಹಿಂಸೆ ನೀಡುತ್ತಿದ್ದಾಳೆಂದು ಕಮ್ರಾನ್ ಖಾನ್.ದೂರಿದ್ದಾನೆ.
ಕಮ್ರಾನ್ ಖಾನ್ ಪತ್ನಿ ಆಯೇಷಾ ನಿದ್ರಾ ಕಾಯಿಲೆಗೆ ಬೇಸತ್ತು ಮಾವ ಆರಿಫುಲ್ಲ , ಅತ್ತೆ ಹೀನಾ ಕೌಸರ್, ಮೈದುನ ಮೊಹಮ್ಮದ್ ಮೋಯಿನ್ ವಿರುದ್ಧ ದೂರು ದಾಖಲಿಸಿದ್ದಾನೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.