Ad Widget .

ಹೊಸರೂಪದಲ್ಲಿ ಎಂಟ್ರಿ ಕೊಡ್ತಿದೆ ಕೊರೊನಾ| ಸಕ್ರಿಯ ಪ್ರಕರಣಗಳಲ್ಲಿ ದಿಢೀರ್ ಏರಿಕೆ

ಸಮಗ್ರ ನ್ಯೂಸ್: ಅಬ್ಬರಿಸಿ ಬೊಬ್ಬಿರಿದಿದ್ದ ಮಹಾಮಾರಿ ಕೊರೊನಾ ಇನ್ನೇನು ತೊಲಗೇಬಿಡ್ತು ಅಂತ ಜನ ನಿಟ್ಟುಸಿರು ಬಿಡ್ತಿರೋ ಹೊತ್ತಲ್ಲೇ H3N3 ರೂಪದಲ್ಲಿ ಶಾಕ್ ನೀಡುತ್ತಿದೆ. 3 ತಿಂಗಳ ಬಳಿಕ ದೇಶದಲ್ಲಿ ಕೋವಿಡ್ ಮತ್ತೆ ಏರಿಕೆ ಕಾಣ್ತಿದ್ದು ಕರ್ನಾಟಕ, ಕೇರಳ, ಮಹಾರಾಷ್ಟ್ರದಲ್ಲಿ ಅಪಾಯದ ಮುನ್ಸೂಚನೆ ನೀಡಿದೆ.

Ad Widget . Ad Widget . Ad Widget . Ad Widget .

ದೇಶದಲ್ಲಿ ಮತ್ತೆ ಕೊರೊನಾ ಮಹಾಮಾರಿ ಅಟ್ಟಹಾಸ
ದೇಶದಲ್ಲಿ ಸಂಪೂರ್ಣ ಹತೋಟಿಗೆ ಬಂದಿದ್ದ ಕೊರೊನಾ ಮಹಾಮಾರಿ ಕಳೆದೊಂದು ವಾರದಿಂದ ಮತ್ತೆ ತನ್ನ ಆರ್ಭಟ ಶುರು ಮಾಡಿದೆ. 114 ದಿನಗಳ ಬಳಿಕ ಭಾರತದಲ್ಲಿ ದೈನಂದಿನ ಕೇಸ್​ಗಳ ಸಂಖ್ಯೆ 500ರ ಗಡಿ ದಾಟಿದೆ. ಅದ್ರಲ್ಲೂ ಕಳೆದ 11 ದಿನಗಳಲ್ಲಿ ಸರಾಸರಿ ಕೇಸ್ ಡಬಲ್ ಆಗಿದೆ. ಇದೇ ವೇಳೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,809 ಕ್ಕೆ ಏರಿಕೆ ಆಗಿದೆ. ಕರ್ನಾಟಕದಲ್ಲಿ 521, ಕೇರಳ 1555, ಮಹಾರಾಷ್ಟ್ರ 551, ಗುಜರಾತ್ 231, ತಮಿಳುನಾಡು 234 ಹಾಗೂ ತೆಲಂಗಾಣದಲ್ಲಿ 213 ಸಕ್ರಿಯ ಪ್ರಕರಣಗಳಿವೆ.

Ad Widget . Ad Widget .

ಭಾರತದಲ್ಲಿ ಕಳೆದ ಶನಿವಾರ 524 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ ದೇಶದೆಲ್ಲೆಡೆ 444 ಕೊರೊನಾ ಪ್ರಕರಣ ಪತ್ತೆಯಾಗಿದ್ದು ಇದು 2022ರ ನವೆಂಬರ್ ಬಳಿಕ ದಾಖಲಾದ ಗರಿಷ್ಟ ಪ್ರಕರಣ ಇದಾಗಿದೆ. ಕಳೆದ ಏಳು ದಿನಗಳಲ್ಲಿ ದೇಶದಲ್ಲಿ 2,671 ಹೊಸ ಪ್ರಕರಣಗಳು ಪತ್ತೆಯಾಗಿವೆ. ಹಿಂದಿನ ಏಳು ದಿನಗಳ ಕೇಸ್​ಗಿಂತ ಶೇ.50ರಷ್ಟು ಹೆಚ್ಚಳವಾಗಿದೆ. ಕರ್ನಾಟಕ 584, ಕೇರಳ 520, ಮಹಾರಾಷ್ಟ್ರದಲ್ಲಿ 512 ಕೇಸ್ ಒಂದೇ ವಾರದಲ್ಲಿ ಹೆಚ್ಚಿದೆ. ಮಹಾರಾಷ್ಟ್ರದಲ್ಲಿ ಶೇ.86ರಷ್ಟು ಸೋಂಕು ಏರಿಕೆಯಾಗಿದೆ. ಇನ್ನು ಗುಜರಾತ್​ನಲ್ಲಿ ಒಂದೇ ವಾರದಲ್ಲಿ 190 ಕೇಸ್​​ಗೆ ಏರಿಕೆ, ತಮಿಳುನಾಡು 224, ತೆಲಂಗಾಣದಲ್ಲಿ 197 ಕೇಸ್ ಪತ್ತೆಯಾಗಿದೆ.

ಕಳೆದ 7 ದಿನಗಳಲ್ಲಿ ಭಾರತದಲ್ಲಿ 6 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕೇರಳದಲ್ಲಿ ನಿನ್ನೆ ಮತ್ತೊಬ್ಬರು ಕೊರೊನಾಗೆ ಮೃತಪಟ್ಟಿದ್ದು ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5 ಲಕ್ಷ 30 ಸಾವಿರ 781ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗ್ತಿರೋದು ಭೀತಿ ಮೂಡಿಸಿದೆ.

Leave a Comment

Your email address will not be published. Required fields are marked *