Ad Widget .

ಕಳಸ: ಕುಡಿಯುವ ನೀರಿಗೆ ಒತ್ತಾಯಿಸಿ ಇಡಕಣಿ ಗ್ರಾ.ಪಂಗೆ ಮುತ್ತಿಗೆ

ಸಮಗ್ರ ನ್ಯೂಸ್: ಇಡಕಿಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಬೈಲು ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಮಂಜೂರಾದ ಆನೆಕಾಡು ನೀರಿನ ಯೋಜನೆಯ ಕಾಮಗಾರಿ ನೆನೆಗುದಿಗೆ ಬಿದ್ದಿರುವುದನ್ನು ಖಂಡಿಸಿ ಹಿರೇಬೈಲು ಗ್ರಾಮಸ್ಥರು ಸೋಮವಾರ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

Ad Widget . Ad Widget .

ಮರಸಣಿಗೆ ಗ್ರಾಮ ವ್ಯಾಪ್ತಿಯ ಆನೆಕಾಡು ಪ್ರದೇಶದಿಂದ ಹಿರೇಬೈಲು ಗ್ರಾಮಕ್ಕೆ ನೀರು ಪೂರೈಸಲು 48 ಲಕ್ಷ ರುಪಾಯಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದ್ದು ಈ ವೇಳೆಗೆ ಪೂರ್ಣಗೊಳ್ಳಬೇಕಿತ್ತು.ಆದರೆ ಕಾಮಗಾರಿಯು ನೆನೆಗುದಿಗೆ ಬಿದ್ದಿದ್ದು ಹಿರೇಬೈಲಿಗೆ ನೀರು ತಲುಪುವ ಆಶಾಭಾವನೆ ಇಲ್ಲ.ನಾವು ಬೇಸಿಗೆಯಲ್ಲಿ ಕುಡಿಯುವ ನೀರು ಇಲ್ಲದೆ ಬಳಲುತ್ತಿದ್ದೇವೆ.ಇದಕ್ಕೆ ಯಾರು ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Ad Widget . Ad Widget .

ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಜಗದೀಶ್ ಭಂಡಾರಿ ಹಿರೇಬೈಲಿಗೆ ನೀರು ಕೊಡಲು ಆನೆಕಾಡು ಯೋಜನೆ ಕಾಮಗಾರಿ ಆರಂಭ ಮಾಡಲಾಗಿತ್ತು.ಆದರೆ ಗುತ್ತಿಗೆದಾರ ಕಾಮಗಾರಿ ಮುಗಿಸಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಎಂಜಿನಿಯರ್ಗಳಿಗೆ ಕರೆ ಮಾಡಿದರೂ ಅವರು ಸಮರ್ಪಕ ಉತ್ತರ ಕೊಡುತ್ತಿಲ್ಲ ಎಂದು ಗ್ರಾಮಸ್ಥರಿಗೆ ಸ್ಪಷ್ಟನೆ ನೀಡಿದರು.

ಇದಕ್ಕೆ ತೃಪ್ತರಾಗದ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಸ್ಥಳಕ್ಕೆ ಬರಲೇಬೇಕು ಎಂದು ಪಟ್ಟು ಹಿಡಿದರು.ಕೆಲ ಕಾಲದ ನಂತರ ಸ್ಥಳಕ್ಕೆ ಬಂದ ಕಿರಿಯ ಎಂಜಿನಿಯರ್ ನಟರಾಜ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.ಸರ್ಕಾರ ಹಣ ಕೊಟ್ಟರೂ ಕೆಲಸ ಮಾಡಿಸಲು ನಿಮಗೆ ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಜನರು ಗದರಿದರು.
2 ವಾರದಲ್ಲಿ ಆನೆಕಾಡು ಯೋಜನೆಯ ಪೈಪ್ಲೈನ್ ಕೆಲಸ ಮುಗಿಸಿ ಹಿರೇಬೈಲಿಗೆ ನೀರು ಹರಿಸುವ ಬಗ್ಗೆ ಎಂಜಿನಿಯರ್ ಭರವಸೆ ನೀಡಿದರು.ನಿಮ್ಮ ನ್ನು ನಂಬುವುದಿಲ್ಲ ಎಂದು ಗ್ರಾಮಸ್ಥರು ಹೇಳಿದಾಗ, ಪಂಚಾಯಿತಿ ಅಧ್ಯಕ್ಷ ಜಗದೀಶ್ ಮಧ್ಯಪ್ರವೇಶ ಮಾಡಿ 15 ದಿನದಲ್ಲಿ ನೀರು ಪೂರೈಸುವುದಾಗಿ ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಚಂದ್ರು, ಲೂಯಿಸ್, ಅಜಿತ್, ರುಕ್ಮಿಣಿ, ಸುಶೀಲ ರಾಜೇಶ್, ಸುರೇಶ್ ಮುಂತಾದವರು ಇದ್ದರು.

Leave a Comment

Your email address will not be published. Required fields are marked *