Ad Widget .

ರೌಡಿ ಶೀಟರ್ ಮುಂದೆ ಕೈಮುಗಿದು ನಿಂತ ಪ್ರಧಾನಿ ಮೋದಿ| ಕಾಂಗ್ರೆಸ್ ನಿಂದ ತೀವ್ರ ವಾಗ್ದಾಳಿ

ಸಮಗ್ರ ನ್ಯೂಸ್: ನಿನ್ನೆ ಅಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯಗೆ ಭೇಟಿ ನೀಡಿ ಬೆಂಗಳೂರು- ಮೈಸೂರು ಎಕ್ಸ್​ಪ್ರೆಸ್​ವೇ ಉದ್ಘಾಟಿಸಿ ಹೋಗಿದ್ದಾರೆ. ಆದರೆ, ಮೋದಿ ಓರ್ವ ರೌಡಿ ಶೀಟರ್​ಗೆ ಕೈಮುಗಿದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

Ad Widget . Ad Widget .

ಮೋದಿ ಮಂಡ್ಯ ಹೆಲಿಪ್ಯಾಡ್‍ಗೆ ಬಂದಿಳಿದ ವೇಳೆ ಬಿಜೆಪಿ ಮುಖಂಡರು ಸ್ವಾಗತ ಕೋರಿದ್ದರು. ಈ ವೇಳೆ ಬಿಜೆಪಿ ಮುಖಂಡರ ಜೊತೆ ರೌಡಿ ಶೀಟರ್ ಫೈಟರ್ ರವಿ ಸಹ ಕಾಣಿಸಿಕೊಂಡಿದ್ದು, ಮೋದಿಗೆ ಕೈ ಮುಗಿದು ಸ್ವಾಗತ ಕೋರಿದ್ದಾರೆ. ಇದಕ್ಕೆ ಮೋದಿ ಸಹ ಫೈಟರ್ ರವಿ ಎದುರು ಕೈ ಮುಗಿದು ನಿಂತಿದ್ದು, ಈ ಫೋಟೋ ಭಾರೀ ವೈರಲ್ ಆಗುತ್ತಿದೆ. ಇನ್ನು ಇದೇ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್, ಬಿಜೆಪಿ ಹಾಗೂ ಮೋದಿ ವಿರುದ್ಧ ಕಿಡಿಕಾರಿದೆ.

Ad Widget . Ad Widget .

ಫೈಟರ್​ ರವಿ ಹಾಗೂ ನರೇಂದ್ರ ಮೋದಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ. ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಕಳಂಕ ತಂದಿದ್ದಾರೆ. ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದೆ.

ಮೋದಿ ಅವರು ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣದಿಂದ ಮಂಡ್ಯ ಪಿಇಎಸ್ ಹೆಲಿಪ್ಯಾಡ್‍ಗೆ ಹೆಲಿಕಾಪ್ಟರ್​ಲ್ಲಿ ಬಂದಿಳಿದ ವೇಳೆ ಬಿಜೆಪಿ ಮುಖಂಡರು ಮೋದಿ ಅವರಿಗೆ ಗಾರ್ಲೆಂಡ್ ಮಾಡಿ ಸ್ವಾಗತ ಕೋರಿದರು. ಈ ವೇಳೆ ಬಿಜೆಪಿ ಮುಖಂಡರ ಜೊತೆ ಫೈಟರ್ ರವಿ ಸಹ ಮೋದಿ ಅವರಿಗೆ ಸ್ವಾಗತ ಕೋರಿದ್ದಾರೆ. ಈ ಹಿಂದೆ ಫೈಟರ್ ರವಿ ಬಿಜೆಪಿಗೆ ಸೇರ್ಪಡೆಯಾದ ವೇಳೆ ದೊಡ್ಡಮಟ್ಟದ ಸುದ್ದಿಯಾಗಿತ್ತು. ಅಲ್ಲದೇ ಕಾಂಗ್ರೆಸ್ ಬಿಜೆಪಿ ರೌಡಿಶೀಟರ್​ಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ರಾಜ್ಯದಲ್ಲಿ ರೌಡಿ ರಾಜಕೀಯ ಮಾಡಲು ಮುಂದಾಗಿದೆ ಎಂದು ವಾಗ್ದಾಳಿ ಮಾಡಿತ್ತು.

Leave a Comment

Your email address will not be published. Required fields are marked *