Ad Widget .

ದ್ವಾದಶ ರಾಶಿಗಳ ವಾರ ಭವಿಷ್ಯ

ಸಮಗ್ರ ನ್ಯೂಸ್: ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಭವಿಷ್ಯ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹಾಗೂ ಕುತೂಹಲವಿರುತ್ತದೆ. ಅದರಂತೆ 2023ರ ಮಾರ್ಚ್ 12ರಿಂದ ಮಾರ್ಚ್ 18ರ ವರೆಗಿನ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

Ad Widget . Ad Widget .

ಮೇಷ: ದ್ವಿತೀಯದಲ್ಲಿನ ಕುಜನು ಭೂಮಿಗೆ ಸಂಬಂಧಪಟ್ಟ ಸಂಪತ್ತನ್ನು ನೀಡುವನು. ಏಕಾದಶದಲ್ಲಿರುವ ಶನಿ ಹಾಗೂ ಬುಧ ಧನ, ಅಧಿಕಾರ, ಇಚ್ಛಿತ ಕಾರ್ಯವನ್ನು ಪೂರ್ತಿಗೊಳಿಸುವನು. ದ್ವಾದಶದಲ್ಲಿರುವ ಗುರು ಮತ್ತು ಸೂರ್ಯರು ಮಂಗಲ ಕಾರ್ಯಗಳನ್ನು ಮಾಡಿಸಿ ನಿಮ್ಮ ಸಂಪತ್ತನ್ನು ಖಾಲಿ ಮಾಡಿಸುವರು. ಪ್ರೇಕ್ಷಣೀಯ ಪ್ರವಾಸ ಮೊದಲಾದ ವಿನೋದ ಕಾರ್ಯಗಳನ್ನು ಮಾಡುತ್ತೀರಿ. ನಿಮ್ಮ ರಾಶಿಗೆ ವಾರದ ಮಧ್ಯದಲ್ಲಿ ಶುಕ್ರನ ಪ್ರವೇಶವಾಗಲಿದ್ದು ಸಂಪತ್ತನ್ನು ಇತ್ತು ರಕ್ಷಿಸುತ್ತಾನೆ. ಮಿಶ್ರಫಲವನ್ನು ನೀವು ಅನುಭವಿಸುವಿರಿ. ಗುರುವಿನ ದರ್ಶನವನ್ನು ಮಾಡಿ.

Ad Widget . Ad Widget .

ವೃಷಭ: ಗುರುಬಲವಿದ್ದು ನಿಮಗೆ ಬಂದ ಸಂಕಟವನ್ನು ಅನಾಯಾಸವಾಗಿ ನೀಗುವುದು. ಏಕಾದಶದಲ್ಲಿರುವ ಗುರುವು ಆರ್ಥಿಕ ಅಭಾವದಲ್ಲಿಯೂ ಸಂತೋಷವಾಗಿ ಇರಿಸುವನು. ದ್ವಾದಶದ ಶುಕ್ರನು ಸ್ವಲ್ಪ ಸಂಪತ್ತನ್ನು ವ್ಯಯ ಮಾಡಿಸುವನು. ನೀವು ಸ್ವಭಾವತಃ ಯಾವುದಕ್ಕೂ ಜಗ್ಗದ ಕುಗ್ಗದ ಕಾರಣ ನಿಮಗುಂಟಾಗುವ ನೋವನ್ನು ಎದುರಿಸುವಿರಿ. ಬುಧನು ಶನಿಯ ಜೊತೆಗಿದ್ದು ಮಾತು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಎಲ್ಲವೂ ಕೆಲವು ದಿನದಲ್ಲಿ ಸರಿಯಾಗುವುದು. ಪ್ರೀತಿಯಲ್ಲಿ ಬೀಳುವ ಸಂಭವವಿದೆ. ಗಣಪತಿಯ ಸ್ತೋತ್ರ ಮಾಡಿ.

ಮಿಥುನ: ಶುಕ್ರನು ಏಕಾದಶ ಸ್ಥಾನಕ್ಕೆ ಬಂದಿದ್ದಾನೆ. ರಾಹುವೂ ಅಲ್ಲಿರುವುದರಿಂದ ಆದಾಯವಿದ್ದರೂ ಸರಿಯಾದ ದಾರಿಯಲ್ಲಿ ಆಗದೇ ವಾಮಮಾರ್ಗದಿಂದ ಸಂಪಾದನೆ ಮಾಡುವಂತೆ ಪ್ರೇರಿಸುತ್ತಾನೆ. ಪಂಚಮದ ಕೇತುವು ಮಕ್ಕಳಿಂದ ಕಿರಿಕಿರಿಯನ್ನು ತರಿಸಬಹುದು. ಇಂದು ಹಣದ ಹರಿವು ಚೆನ್ನಾಗಿರಲಿದೆ. ನೀವು ಗುರಯಬಲದ‌ ನಿರೀಕ್ಷೆಯಲ್ಲಿ ಇರಬಹುದು. ವೃತ್ತಿಯಲ್ಲಿ ಒಳ್ಳೆಯನ್ನು ಮಾಡಬಹುದು. ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮಗೆ ಆಗುವುದು. ಮಾಡಲಾಗದ ಕೆಲಸವನ್ನು ನೀವಿಂದು ಮಾಡಲಿದ್ದೀರಿ‌.

ಕಟಕ: ಅಷ್ಟಮದಲ್ಲಿರುವ ಶನಿಯು ನಿಮಗೆ ಮಾನಸಿಕವಾದ ಹಿಂಸೆಯನ್ನು, ನೋವನ್ನು ಕೊಡಬಹುದು. ನಿಮಗೆ ಕೆಲಸದಲ್ಲಿ ವಿಘ್ನಗಳು ಬರಬಹುದು. ನಿಧಾನವಾಗಿ ಕುಂಟುತ್ತಾ ಸಾಗುವುದು. ಮನೋವೇಗಕ್ಕೂ ಕೆಲಸಕ್ಕೂ ತಾಳೆಯಾಗದೇ ಕಿರಿಕಿ ಎನಿಸಬಹುದು. ನವಮದಲ್ಲಿರುವ ಗುರುವು ನಿಮ್ಮ ರಕ್ಷಣೆಯನ್ನು ಮಾಡುವನು. ಹೆದರುವ ಅವಶ್ಯಕತೆ ಇರುವುದಿಲ್ಲ. ವಿವಾದವು ಸೃಷ್ಟಿಯಾಗದಂತೆ ನೋಡಿಕೊಳ್ಳಿ. ವಿವಾಹದ ಮಾತುಕತೆಗಳು ಸದ್ಯಕ್ಕೆ ಬೇಡ. ಹೊಸ ಉದ್ಯಮವನ್ನು ಆರಂಭಿಸುವುದಿದ್ದರೆ ಸಮಯ ಸ್ವಲ್ಪ ಕಳೆಯಲಿ. ಕುಲದೇವರಿಗೆ ಶುದ್ಧ ಗೋವಿನ ತುಪ್ಪದಿಂದ ಆರತಿ ಬೆಳಗಿ.

ಸಿಂಹ: ಸಪ್ತಮದಲ್ಲಿ ಶನಿ ಹಾಗೂ ಅಷ್ಟಮದಲ್ಲಿ ಗುರುವಿದ್ದಾನೆ. ರವಿಯೂ ಒಟ್ಟಿಗೆ ಇದ್ದೂ ಪ್ರಯೋಜನವಿಲ್ಲ‌. ಎಲ್ಲವೂ ಗಗನ ಸುಮದಂತೆ ಗೋಚರಿಸುವುವು. ರವಿ ಹಾಗು ಗುರುವಿನ ಯುತಿಯು ಅಷ್ಟಮದಲ್ಲಿರುವ ಕಾರಣ ಸ್ವಲ್ಪಮಟ್ಟಿಗೆ ಪ್ರತಿಕೂಲವಿದೆ. ಖರ್ಚಿಗೆ ಸಮಾನವಾಗಿ ಹಣವು ಸಿಗಲಿದೆ. ಹಣವನ್ನು ಹೊಂದಿಸಲಾರದೆ ಕಷ್ಟಪಡಬೇಕಾಗಬಹುದು. ವಾರದ ಮಧ್ಯದಲ್ಲಿ ಶುಕ್ರನು ನವಮಕ್ಕೆ ಬರಲಿದ್ದಾನೆ. ರಾಹುವಿನ ಜೊತೆ ಇರುವುದರಿಂದ ಮಿಶ್ರಫಲವನ್ನು ಕೊಡುವನು. ಕುಜನೂ ಏಕಾದಶಕ್ಕೆ ಬರಲಿದ್ದಾನೆ. ಯಂತ್ರೋಪಕರಣದ ಮಾರಾಟಗಾರರಿಗೆ ಲಾಭವಾಗಲಿದೆ. ಭೂಮಿಯ ಖರೀದಿಯನ್ನು ಮಾಡಲೂಬಹುದು. ಶಿವನ ಸನ್ನಿಧಿಗೆ ಹೋಗಿ ಬನ್ನಿ.

ಕನ್ಯಾ: ಈ ವಾರದಲ್ಲಿ ಕುಜನು ದಶಮಸ್ಥಾನಕ್ಕೆ ಬರಲಿದ್ದಾನೆ. ವೃತ್ತಿಜೀವನವನ್ನು ನಡೆಸುವವರಿಗೆ ಶ್ರೇಯಸ್ಸಿದೆ. ಸಪ್ತಮದಲ್ಲಿ ಗುರು ಹಾಗೂ ಶುಕ್ರರಿದ್ದು ಅನೇಕ ಅನುಕೂಲಗಳು ಆಗಿವೆ. ಶುಕ್ರನು ಅಷ್ಟಮಕ್ಕೆ ಹೋಗಲಿದ್ದನೆ. ಸಂಪತ್ತನ್ನೂ ಒಳ್ಳೆಯ ಉದ್ಯೋಗವನ್ನೂ ನೀಡುವನು. ಸಪ್ತಮದಲ್ಲಿರುವ ಗುರು ಒಳ್ಳೆಯದರ ಸಹವಾಸವನ್ನು ಮಾಡಿಸುವನು. ಷಷ್ಠದಲ್ಲಿರುವ ಶನಿ ನಿಮ್ಮ ನಿರ್ವಿಘ್ನವನ್ನು ತರುತ್ತಾನೆ. ಷಷ್ಠದಲ್ಲಿರುವ ಬುದ್ಧನಿಂದ ಹಿತಶತ್ರುಗಳ ಕಾಟವೂ ಸ್ವಲ್ಪ ಇರಲಿದೆ‌. ಅಷ್ಟಮದ ರಾಹುವು ಪತ್ನಿಯ ಆರೋಗ್ಯವನ್ನು ಕೆಡಿಸುವನು.

ತುಲಾ: ಆರ್ಥಿಕ ಅಭದ್ರತೆಯು ನಿಮ್ಮನ್ನು ಕಾಡಬಹುದು. ನಿಮ್ಮವರ ಮೇಲೆ ನಿಮಗೆ ಅನುಮಾನ ಬರುವ ಹಾಗೆ ಆಗಲಿದೆ. ಬಹಳವಾಗಿ ಮನಸ್ಸಿನಲ್ಲಿ ಕೊರಗಬಹುದು. ತಾಳ್ಮೆಯಿಂದ ಇರಿ. ಉದ್ವೇಗಕ್ಕೆ ಒಳಗಾಗಿ ಸಲ್ಲದ ಕಾರ್ಯಗಳನ್ನು ಮಾಡಬೇಡಿ. ಕುಟುಂಬದಲ್ಲಿ ಅಶಾಂತಿ ಇರಲಿದೆ. ವಾರದ ಆರಂಭದಲ್ಲಿ ವ್ಯಾಪಾರದಲ್ಲಿ ನೀವು ಬಯಸಿದಷ್ಟು ಲಾಭವು ಇರದು. ಉಗುರಿನಲ್ಲಿ ಆಗುವ ಕೆಲಸಕ್ಕೆ ಕೊಡಲಿ ತರಬೇಕಾಗಬಹುದು. ಒಂದೇ ರೀತಿಯಲ್ಲಿ ಜೀವನ ಸಾಗುತ್ತಿದೆ ಎಂದೆನಿಸಬಹುದು. ಷಷ್ಠದಲ್ಲಿರುವ ಶುಕ್ರನು ಸಪ್ತಮಕ್ಕೆ ಹೋಗುವನು. ಗುರುವು ಷಷ್ಠದಲ್ಲಿಯೇ ಇದ್ದು ನಿಮಗೆ ಅನಾರೋಗ್ಯವನ್ನು ಕೊಡುವನು. ಇದನ್ನು ಕೆಲವು ದಿನ ಅನುಭವಿಸಲೇ ಬೇಕಾಗಿದೆ. ಸದ್ಗುರುವಿನ ಆಶೀರ್ವಾದವು ನಿಮಗೆ ಬೆಂಬಲವಾಗಿರಲಿದೆ.

ವೃಶ್ಚಿಕ: ವೃತ್ತಿಯಲ್ಲಿ ಉನ್ನತ ಸ್ಥಾನವನ್ನು ಬಯಸುತ್ತಿದ್ದರೆ ಸಿಗುವ ಸಾಧ್ಯತೆ ಇದೆ. ಈ ವಾರದ ಶುಕ್ರನು ನಿಮ್ಮ ಷಷ್ಠಸ್ಥಾನಕ್ಕೆ ಬರಲಿದ್ದಾನೆ. ನಿಮ್ಮ ರೋಗನಾಶ ಅಥವಾ ಶತ್ರು ನಾಶವು ಸ್ತ್ರೀ ಕಡೆಯಿಂದ ಆಗಲಿದೆ‌. ಅಷ್ಟಮಸ್ಥಾನಕ್ಕೆ ಕುಜನು ಪ್ರವೇಶಿಸಲಿದ್ದಾನೆ. ವಾಹನವನ್ನು ಚಲಿಸುವಾಗ ಎಚ್ಚರಿಕೆ ಇರಲಿ. ಪಂಚಮದಲ್ಲಿರುವ ಗುರುವು ನಿಮಗೆ ಸಂತಾನೋತ್ಸವದ ವಾರ್ತೆಯನ್ನು ಕೇಳಿಸುವನು. ಆಸ್ತಿಯನ್ನು ಮಾರಾಟ ಮಾಡುವ ಮನಸ್ಸುಳ್ಳವರಾದರೆ ಒಳ್ಳೆಯ ಕಾಲ, ಮಾಡಿಬಿಡಿ. ಚತುರ್ಥದಲ್ಲಿರುವ ಶನಿಯು ಕುಟುಂಬದಲ್ಲಿ ಮನಸ್ತಾಪವು ಉಂಟಾಗುವಂತೆ ಮಾಡುವನು. ಅತಿಯಾದ ಆಲೋಚನೆಯನ್ನು ಮಾಡದೇ ಕಾರ್ಯ ಮಾಡಿ. ಸುಬ್ರಹ್ಮಣ್ಯನು ನಿಮ್ಮ ಇಷ್ಟಾರ್ಥವನ್ನು ಈಢೇರಿಸುವನು‌.

ಧನಸ್ಸು: ವಾರದ ಮಧ್ಯದಲ್ಲಿ ಪಂಚಮ ಸ್ಥಾನಕ್ಕೆ ಹೋಗುವ ಶುಕ್ರನು ಮಕ್ಕಳಿಂದ ಅನುಕೂಲವನ್ನು ಮಾಡಿಸುವನು. ತೃತೀಯದಲ್ಲಿರುವ ಶನಿ ಹಾಗೂ ಬುಧರು ನಿಮ್ಮ ಸಾಮರ್ಥ್ಯವನ್ನು ಗೊತ್ತಾಗುವಂತೆ ಮಾಡುವರು. ಗ್ರಹಗಳು ಅನುಕೂಲರಾಗಿದ್ದು ಕೈ ಹಾಕಿದ ಕೆಲಸವು ಕೈಗೂಡುವುದು. ಮೇಲಧಿಕಾರಿಗಳಿಂದ ಪ್ರಶಂಸೆಯನ್ನು ಗಳಿಸುವಿರಿ. ವ್ಯವಸಾಯಗಾರರಿಗೆ ಸರ್ಕಾರದಿಂದ ಧನಸಹಾಯವು ಸಿಗಲಿದೆ. ಬರಬೇಕಾದ ಹಣವೂ ಈ ವಾರ ಬರಲಿದೆ. ವಿವಾಹ ಸಂಬಂಧವನ್ನು ಮಾತನಾಡಲು ಹೋಗುವುದು ಬೇಡ. ಮೃತ್ಯುಂಜಯನನ್ನು ಸ್ಮರಣೆ ಮಾಡಿ.

ಮಕರ: ದ್ವಿತೀಯದಲ್ಲಿ ಶನಿಯಿದ್ದರೂ ಸಾಡೇಸಾಥ್ ಮುಕ್ತಾಯವಾಗಿಲ್ಲ ಇನ್ನೂ ಎನ್ನುವುದನ್ನು ನೆನಪಿನಲ್ಲಿಡಬೇಕು. ಸುತ್ತಮುತ್ತಲೂ ನಿಮ್ಮನ್ನು ಗಮನಿಸುವ ಆರೋಪಿಸುವ ಜನರಿರುತ್ತಾರೆ. ನಡೆಯಲ್ಲಿಯೂ ಮಾತಿನಲ್ಲಿಯೂ ಎಚ್ಚರಿಕೆ ಇರಲಿ. ದ್ವಿತೀಯದಲ್ಲಿಯೇ ಇರುವ ಬುಧನು ಸೌಖ್ಯವನ್ನು ಹೆಚ್ಚಿಸುತ್ತಾನೆ. ನೀವು ಅಂದುಕೊಂಡ ಹೊಸ ಯೋಜನೆಗಳನ್ನು ಪ್ರಾರಂಭಿಸಬಹುದು. ಈ ವಾರ ಉತ್ತಮ ಅವಕಾಶಗಳು ನಿಮ್ಮ ಮುಂದೆ ತೆರೆದುಕೊಳ್ಳಲಿವೆ. ಯೋಚಿಸಿ ಅವಕಾಶಗಳನ್ನು ಬಳಸಿಕೊಳ್ಳಿ. ಮನಸ್ಸಿನೊಳಗೇ ತರತರದ ಕಲ್ಪನೆಗಳನ್ನು ಇಟ್ಟುಕೊಂಡು ಸಂಕಟಪಡುವಿರಿ. ಶನೈಶ್ಚರನಿಗೆ ಎಳ್ಳೆಣ್ಣೆ ದೀಪಕ್ಕೆ ಬೆಳಗಿ.

ಕುಂಭ: ಶನಿ ನಿಮ್ಮ ರಾಶಿಯಲ್ಲೇ ಇರಲಿದ್ದಾನೆ. ಮಾನಸಿಕ ಕಿರಿಕಿರಿಯು ಇದ್ದೇ ಇರುತ್ತದೆ. ಇದನ್ನು ಗಮನಿಸಿಕೊಂಡು ನೆಮ್ಮದಿಗೋಸ್ಕರ ಮನುಷ್ಯಪ್ರಯತ್ನವನ್ನು ಮಾಡುವುದು ಒಳ್ಳೆಯದು. ಉದ್ಯೋಗ ಹಾಗೂ ಸಂಸಾರವನ್ನು ತೂಗಿಸುವಲ್ಲಿ ಸೋಲುತ್ತಿರಬಹುದು. ಕಾರದೊತ್ತಡದಿಂದ ನಿದ್ರಾಹೀನತೆ ಉಂಟಾಗುವುದು. ಚತುರ್ಥಸ್ಥಾನಕ್ಕೆ ಕುಜನು ಸಂಚಾರಮಾಡಲಿದ್ದಾನೆ. ಭೂಮಿಯನ್ನು ಖರೀದಿಸುವ ಹಾಗಿದ್ದರೆ ಖರೀದಿಸಭುದು. ದ್ವಿತೀಯಕ್ಕೆ ಸಪ್ತಮಾಧಿಪತಿಯು ಹೋದುವುದಿಂದ ಪತ್ನಿಯ ಕಡೆಯಿಂದ ಬರುವ ಸಂಪತ್ತು ಬರಲಿದೆ. ಗುರುಚರಿತ್ರೆಯನ್ನು ಪಠಿಸಿ, ಇಲ್ಲವೇ ದತ್ತಾತ್ರೇಯ ಸ್ತೋತ್ರವನ್ನು ಪಾರಾಯಣ ಮಾಡಿ.

ಮೀನ: ನಿಮಗೆ ದ್ವಾದಶದ ಶನಿಯಿಂದ ಬಿಸಿ ತುಪ್ಪದ ಅನುಭವವಾಗಲಿದೆ. ಆರ್ಥಿಕತೆಯಲ್ಲಿ ಬಹಳ ವ್ಯತ್ಯಾಸವಾಗಲಿದೆ. ಕೊಟ್ಟ ಹಣವು ಬರುತ್ತದೆ ಎಂಬ ಆಸೆಯನ್ನು ಬಿಡಬಹುದು. ಸಾಡೇಸಾಥ್ ಆರಂಭವಾಗಿರುವುದರಿಂದ ಅಲ್ಪ ಬಿಸಿಯೂ ಮತ್ತಷ್ಟು ಬಿಸಿಯಾಗಲಿದೆ. ಆಪ್ತರನ್ನು ಕಳೆದುಕೊಳ್ಳಬೇಕಾಗಬಹುದು. ದ್ವಿತೀಯದಲ್ಲಿರುವ ಶುಕ್ರನು ನಿಮಗೆ ತಕ್ಕಮಟ್ಟಿನ ಸಂಕಷ್ಟ ನಿವಾರಕನಾದರೂ ಅವನೊಟ್ಟಿಗೆ ರಾಹುವೂ ಇರುತ್ತಾನೆ ಎನ್ನುವುದನ್ನು ಗಮನಿಸಿಕೊಳ್ಳಬೇಕು. ಹನುಮಾನ್ ಚಾಲೀಸ್, ವಿಷ್ಣು ಸಹಸ್ರನಾಮ ಪಠಿಸಿ ಮುಂದಿನ ಕೆಲಸಕ್ಕೆ ತೆರಳಿ.

Leave a Comment

Your email address will not be published. Required fields are marked *