ಸಮಗ್ರ ನ್ಯೂಸ್: ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿರಿಕ್ ಕೀರ್ತಿ ಅವರ ವೈಯಕ್ತಿಕ ಜೀವನ ಕುರಿತ ಅಪ ಪ್ರಚಾರದ ಸುದ್ದಿಗಳು ಹರಿದಾಡುತ್ತಿದ್ದವು. ಇಂತಹ ಸುದ್ದಿಗಳಿಗೆ ಪ್ರತಿಕ್ರಿಯಿಸಿರುವ ಕಿರಿಕ್ ಕೀರ್ತಿ, ನೆಟ್ಟಿಗರ ವಿರುದ್ಧ ಹರಿಹಾಯ್ದಿದ್ದಾರೆ.
ಈ ಕುರಿತು ಫೇಸ್ ಬುಕ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಕಿರಿಕ್ ಕೀರ್ತಿ, ಪ್ಲೀಸ್ ನಮ್ಮನ್ನು ಬದುಕೋಕೆ ಬಿಡ್ರಪ್ಪ… ಯಾಕ್ ಇಷ್ಟು ಟಾರ್ಚರ್ ಕೊಡ್ತೀರಿ ಎಂದು ಗರಂ ಆಗಿದ್ದಾರೆ. ಎಲ್ಲರಿಗೂ ವೈಯಕ್ತಿಕ ಜೀವನ ಇರುತ್ತೆ. ಅದನ್ನು ಗೌರವಿಸಿ, ಸಾಮಾಜಿಕ ಮಾಧ್ಯಮದಲ್ಲಿ ಗಾಳಿ ಸುದ್ದಿ ಹಬ್ಬಿಸುವುದು, ಅಪ ಪ್ರಚಾರ ಮಾಡುವುದು, ಕೀಳಾಗಿ ನಿಂದಿಸುವುದು ಮಾಡಬೇಡಿ. ನಿಮಗೂ ವೈಯಕ್ತಿಕ ಜೀವನ ಇರುತ್ತೆ. ಮೊದಲು ಅದನ್ನು ಸರಿಪಡಿಸಿಕೊಳ್ಳಿ ಎಂದಿದ್ದಾರೆ.
“ನಾನು ಚೆನ್ನಾಗಿರುವೆ ನಮ್ಮ ಬದುಕು ನಾವು ನೋಡಿಕೊಳ್ಳುತ್ತಿದ್ದೀವಿ. ನಾನು ಏನಾದರೂ ಬಂದು ಅವಳು ಹೀಗೆ ಮಾಡಿದ್ದಾಳೆ ಅಥವಾ ಅವಳು ಬಂದು ನಾನು ಹೀಗೆ ಮಾಡಿರುವೆ ಎಂದು ಏನಾದರೂ ಹೇಳಿದ್ದಾರಾ? 10 ವರ್ಷ ಸಂಸಾರ ಮಾಡಿದವರಿಗೆ ಬದುಕು ಹೇಗೆ ನಿಭಾಯಿಸಬೇಕು ಅನ್ನೋ ಅರಿವು ನಮಗಿದೆ. ನಮ್ಮ ಕಾಲು ಎಳೆದು, ನಮ್ಮ ಹೊಟ್ಟೆ ಉರಿಸುವುದು ಯಾಕೆ ನಿಮ್ಮ ಕಾಮೆಂಟ್ ಪೋಸ್ಟ್‌ನ ನನ್ನ ಕುಟುಂಬದವರು, ಕಣ್ಣೀರು ಹಾಕುವುದು, ಅವಳ ಮನೆಯವರು ನೋಡಿ ಅವರು ಕಣ್ಣೀರು ಹಾಕುವುದು. ಇದರಿಂದ ನಿಮಗೆ ಏನು ಸಿಗುತ್ತದೆ? ನಿಮಗೂ ತಂದೆ ತಾಯಿ ಮಕ್ಕಳು ತಂಗಿ ಅಣ್ಣ ಇರ್ತಾರೆ ಅಲ್ವಾ? ಹಾಗೆ ನಾವು ಕೂಡ ಒಬ್ಬರು ಅಂದುಕೊಳ್ಳಿ. ನಮ್ಮನ್ನು ಬದುಕಲು ಬಿಡಿ.” ಎಂದಿದ್ದಾರೆ.