ಸಮಗ್ರ ನ್ಯೂಸ್: ಪ್ರತಿಷ್ಠಿತ ಗೌಡ ಕುಟುಂಬಗಳ ನಡುವಿನ ಕೆದಂಬಾಡಿ ಕ್ರಿಕೆಟ್ ಹಬ್ಬ 2023 ಕ್ರಿಕೆಟ್ ಕೂಟವು ಏಪ್ರಿಲ್ 15 ರಿಂದ ಏಪ್ರಿಲ್ 25ರ ತನಕ ಕೊಡಗಿನ ಚೆಟ್ಟಿಮಾನಿ ಸಮೀಪ ಕೆದಂಬಾಡಿ ಐನ್‌ಮನೆ ಕ್ರೀಡಾಂಗಣದಲ್ಲಿ ನಡೆಯಲಿದೆ. 28ನೇ ವರ್ಷದ ಗೌಡ ಕುಟುಂಬಗಳ ಕ್ರಿಕೆಟ್ ಕೂಟ ಇದಾಗಿದೆ.
ಪಂದ್ಯಕ್ಕಾಗಿ 2,500 ರೂ. ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ.
ಆಟದ ನಿಯಮಗಳು ಇಂತಿವೆ:
6 ಓವರ್ ಪಂದ್ಯಾಟವಾಗಿರುತ್ತದೆ
ಮೊದಲು ಹೆಸರು ನೊಂದಾಯಿಸಿದ 50 ತಂಡಗಳಿಗೆ ಮಾತ್ರ ಅವಕಾಶ
ಮಾರ್ಚ್ 30 ರ ಒಳಗೆ ಪ್ರವೇಶ ಶುಲ್ಕ ₹1,500 ಮುಂಗಡ ಪಾವತಿ ಮಾಡಿ ಹೆಸರು ನೊಂದಾಯಿಸುವುದು
ಅಂಪೈರ್ ತೀರ್ಮಾನವೇ ಅಂತಿಮ ತೀರ್ಮಾನ
ಟೈ ಆದಲ್ಲಿ ಸೂಪರ್ ಓವರ್
ಸಮಯಕ್ಕೆ ಸರಿಯಾಗಿ ತಂಡವು ಆಗಮಿಸದಿದ್ದಲ್ಲಿ ಎದುರಾಳಿ
ತಂಡವನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುವುದು
ಪ್ರತಿ ತಂಡದಲ್ಲಿ 11 ಮಂದಿ ಆಟಗಾರರು ಒಂದೇ ಗೌಡ ಕುಟುಂಬದ ಸದಸ್ಯರಾಗಿರಬೇಕು
ಆಟಗಾರರ ಆಧಾರ್ ಕಾರ್ಡ್ ಕಡ್ಡಾಯ
ಏಪ್ರಿಲ್ 5 ರಂದು ಪಂದ್ಯಾಟದ ಟೈಸ್ ಹಾಕಲಾಗುವುದು
ಆಟಗಾರರಲ್ಲಿ ಜರ್ಸಿ ಕಡ್ಡಾಯ
ಅರ್ಧ ಗಂಟೆಗೆ ಮುಂಚಿತವಾಗಿ ಮೈದಾನದಲ್ಲಿ ತಂಡ ಹಾಜರಿರತಕ್ಕದ್ದು
ಮಳೆ ಬಂದಲ್ಲಿ ಓವರ್ ಕಡಿತಗೊಳಿಸಲಾಗುವುದು.
ಹೆಸರು ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ :
ಭವಿತ್ ಕೆದಂಬಾಡಿ : 9740782444
ಶೋಧನ್ ಕೆದಂಬಾಡಿ : 8277779954
ಕೃಷ್ಣ ಕೆದಂಬಾಡಿ : 9481701032