ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆಗೆ ಮಿಷನ್ 150 ಹೊತ್ತಿರುವ ಬಿಜೆಪಿ, ತನ್ನ ಟಾರ್ಗೆಟ್ ರೀಚ್‌ಗಾಗಿ ಸಮರಾಭ್ಯಾಸ ನಡೆಸುತ್ತಿದೆ. ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಹಲವು ಯಾತ್ರೆಗಳ ಮೂಲಕ ರಾಜ್ಯಾದ್ಯಂತ ಪ್ರಚಾರ ಕಾರ್ಯವನ್ನು ಆರಂಭಿಸಿದೆ.
ಈ ಬಾರಿಯ 2023ರ ವಿಧಾನಸಭಾ ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಇನ್ನೊಂದು ಚುನಾವಣಾ ಸಮೀಕ್ಷೆಯಲ್ಲಿ ಬಿಜೆಪಿಗೆ ಆಘಾತವಾಗಿದ್ದು, ಇನ್ನೂ ಕೆಲ ರಾಜಕೀಯ ಪಕ್ಷಗಳು ಚುನಾವಣಾ ತಯಾರಿಯನ್ನು ಚುರುಕುಗೊಳಿಸಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ಬರಲಿದೆ ಎಂದು ಲೋಕ್‌ಪೋಲ್ ಸಮೀಕ್ಷೆ ಹೇಳಿದೆ. ಇದರಿಂದಾಗಿ ಆಡಳಿತರೂಢ ಬಿಜೆಪಿಗೆ ಆಘಾತವಾಗುವ ಸಾಧ್ಯತೆಯಿದೆ. ಲೋಕ್‌ಪೋಲ್ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 116 ರಿಂದ 122 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಲಾಗಿದ್ದು, ಈ ಸಮೀಕ್ಷೆಯನ್ನು ಆಧರಿಸಿಯೇ ಕಾಂಗ್ರೆಸ್ ಚುನಾವಣಾ ತಂತ್ರಗಾರಿಕೆಯನ್ನ ರೂಪಿಸುತ್ತಿದೆ ಎಂದು ಹೇಳಲಾಗಿದೆ.
ಇನ್ನೂ ಆಡಳಿತರೂಢ ಬಿಜೆಪಿ ಪಕ್ಷ 140 ಕ್ಕೂ ಸ್ಥಾನಗಳನ್ನ ಗೆಲ್ಲುವ ವಿಶ್ವಾಸ ಇಟ್ಟುಕೊಂಡಿತ್ತು, ಆದರೆ, ಲೋಕ್‌ಪೋಲ್ ಸಮೀಕ್ಷೆಯಿಂದ ಭಾರೀ ಆಘಾತ ಉಂಟು ಮಾಡಿದೆ. ಸಮೀಕ್ಷೆಯ ಪ್ರಕಾರ ಬಿಜೆಪಿಗೆ 77 ರಿಂದ 83 ಸ್ಥಾನಗಳು ಸಿಕ್ಕರೆ, ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ 21 ರಿಂದ 27 ಸ್ಥಾನಗಳು ಸಿಗಬಹುದು ಎಂದು ಸರ್ವೇಯಲ್ಲಿ ಅಂದಾಜಿಸಲಾಗಿದೆ.
ಇನ್ನೂ ಪಕ್ಷೇತರರು 1 ರಿಂದ 4 ಮಂದಿ ಗೆಲುವು ಸಾಧಿಸಬಹುದು ಎಂದೂ ಸರ್ವೇಯಲ್ಲಿ ಹೇಳಲಾಗಿದೆ. ಚುನಾವಣೆಯಲ್ಲಿ ಬಿಜೆಪಿಗೆ ಶೇ 33 ರಿಂದ 36 ರಷ್ಟು ಮತಗಳು ಚಲಾವಣೆ ಆದರೆ ಕಾಂಗ್ರೆಸ್‌ಗೆ ಶೇ 39 ರಿಂದ 42 ರಷ್ಟು ಪ್ರಮಾಣದಲ್ಲಿ ಮತ ಸಿಗಬಹುದು. ಇನ್ನು ಜೆಡಿಎಸ್‌ಗೆ ಶೇ 15 ರಿಂದ 18 ರಷ್ಟು ಮತ ಪಡೆಯಬಹುದು ಎಂದು ಅಂದಾಜಿಸಲಾಗಿದೆ.