ಸಮಗ್ರ ನ್ಯೂಸ್ : ಅಪರಾಧ ಪ್ರವೃತ್ತಿಯುಳ್ಳ ಹನ್ನೊಂದು ಮಂದಿಯನ್ನು ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 6 ತಿಂಗಳ ಕಾಲ ದ.ಕ.ಜಿಲ್ಲೆಯಿಂದ ಗಡೀಪಾರು ಮಾಡಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿಯ ಆಧಾರದ ಮೇಲೆ ತನಿಖೆ ನಡೆಸಿರುವ ಜಿಲ್ಲಾಧಿಕಾರಿಯವರು, ಅಪರಾಧ ಪ್ರವೃತ್ತಿಯುಳ್ಳ, ಸಮಾಜದ ಸ್ವಾಸ್ಥ್ಯಕ್ಕೆ ಗಂಡಾಂತರಕಾರಿಯಾಗಿರುವ ಆರೋಪದಲ್ಲಿ ಇವರನ್ನು ಗಡಿಪಾರು ಮಾಡಲಾಗಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಜಯರಾಜ್ ರೈ ಯಾನೆ ಜಯರಾಜ ಶೆಟ್ಟಿ(49ವ.)ತಂದೆ ರಮಾನಾಥ ರೈ ಯಾನೆ ರಾಮಣ್ಣ ಶೆಟ್ಟಿ, ಅನಿಲೆ ಮನೆ ಬಡಗನ್ನೂರು, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಇಬ್ರಾಹಿಂ ಯಾನೆ ಇಬ್ಬಿ ತಂದೆ ಸುಲೈಮಾನ್, ನೆಹರೂನಗರ, ಹಕೀಂ ಕೂರ್ನಡ್ಕ ಯಾನೆ ಅಬ್ದುಲ್ ಹಕೀಂ ತಂದೆ ಹಸೈನಾರ್, ಕುಮ್ಕಿ ಕಾಲನಿ ಕೂರ್ನಡ್ಕ, ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಅಬೂಬಕ್ಕರ್ ಸಿದ್ದೀಕ್ ಯಾನೆ ಜೆಸಿಬಿ ಸಿದ್ದೀಕ್ ಯಾನೆ ಸಿದ್ದೀಕ್ (35ವ.)ತಂದೆ ಹುಸೈನ್ ಮುಸ್ಲಿಯಾರ್ ಮನೆ ಕರವೇಲು, 34ನೆಕ್ಕಿಲಾಡಿ, ಉಬೈದ್ ಬಿ.ಎಸ್.ಯಾನೆ ಉಬೈದ್ ಕುಪ್ಪೆಟ್ಟಿ, ತಂದೆ ಬಿ.ಎಸ್.ಹಮೀದ್ 1-126 ಸಿಪಿಸಿ ಕಂಪೌಂಡ್ ಉಪ್ಪಿನಂಗಡಿ, ತಸ್ಲೀಂ ಯಾನೆ ತಸಲೀಂ ತಂದೆ ಅಬ್ಬಾಸ್ 1-50 ಬೋವುಮಜಲು ಮನೆ, ತಣ್ಣೀರುಪಂಥ, ಬೆಳ್ಳಾರೆ ಠಾಣಾ ವ್ಯಾಪ್ತಿಯ ರೋಷನ್(32ವ.)ತಂದೆ ಹೊನ್ನಪ್ಪ ಗೌಡ, ಬರೆಪ್ಪಾಡಿ ಕೂವೆತ್ತೋಡಿ ಕುದ್ಮಾರು, ಪ್ರಸಾದ್ ತಂದೆ ಪೂವಣಿ ಗೌಡ ಇಡ್ಯಾಡಿ ಸವಣೂರು, ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ನಜೀರ್ ಕುಣಿಗಲ್ ತಂದೆ ಅಬೂಬಕ್ಕರ್ ಯಾನೆ ಕುಂಞಮೋನು, ಮಾಣಿಮಜಲು ಮನೆಗೋಳ್ತಮಜಲು, ಇಬ್ರಾಹಿಂ ಖಲೀಲ್ ತಂದೆ ಅಬುಸಾಲಿ ಕುರ್ಮಾನು ಮನೆ, ಬಾಳ್ತಿಲ ಗ್ರಾಮ ಹಾಗೂ ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕಿರಣ್ ಕುಮಾರ್ ಡಿ.ಯಾನೆ ಕಿರಣ್ ಶಿಶಿಲ ತಂದೆ ದಿ.ಶೀನಪ್ಪ ಗೌಡ ದೇವಸಕೊಳಕೆಬೈಲು ಶಿಶಿಲ ಗ್ರಾಮ ಇವರನ್ನು ಮಾರ್ಚ್ 6ರಿಂದ ಸೆಪ್ಟೆಂಬರ್ 6ರ ತನಕ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.