ಸಮಗ್ರ ನ್ಯೂಸ್: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.9 ರಂದು ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬಾಳ್ತಿಲದಲ್ಲಿ ನಡೆದಿದೆ. ಬಾಳ್ತಿಲ ನಿವಾಸಿ ಶಿಕ್ಷಕರಾದ ಚಂದ್ರಶೇಖರ ಮತ್ತು ಸೌಮ್ಯ ಅವರ ಪುತ್ರಿ ವೈಷ್ಣವಿ (17) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.
ಪರೀಕ್ಷೆ ಆರಂಭವಾಗುವ ಹಿನ್ನೆಲೆಯಲ್ಲಿ ವೈಷ್ಣವಿ ಮನೆಯಲ್ಲಿ ಪರೀಕ್ಷೆ ತಯಾರಿಯಲ್ಲಿದ್ದಳು. ಹಾಗಾಗಿ ಮಗಳು ಓದುತ್ತಿದ್ದಾಳಾ ಎಂದು ತಾಯಿ ಸೌಮ್ಯ ಅವರು ನೆರೆ ಮನೆಯವರಲ್ಲಿ ವಿಚಾರಿಸಲು ಪೋನ್ ಮಾಡಿದಾಗ ಮನೆ ಬಾಗಿಲು ಹಾಕಲಾಗಿತ್ತು. ನೆರೆಮನೆಯವರು ಮನೆಗೆ ಹೋಗಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದಿದೆ.
ಕಳೆದ ಕೆಲವು ದಿನಗಳಿಂದ ಇವಳು ಖಿನ್ನತೆಗೊಳಗಾಗಿದ್ದಳು. ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ನೀಡಲಾಗಿತ್ತು ಎಂದು ಹೇಳಲಾಗಿದೆ.