ಸಮಗ್ರ ನ್ಯೂಸ್: ಸಹೋದರ ಮತ್ತು ಸಹೋದರಿಯನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದ ತಾಯಿಯನ್ನು ಭೀಕರವಾಗಿ ಕೊಲೆಗೈದ ಘಟನೆ ಉತ್ತರಪ್ರದೇಶದ ಉನ್ನಾವೋದಲ್ಲಿ ನಡೆದಿದೆ.
ಕೊಲೆಯ ನಂತರ ಮಹಿಳೆಯ ಮಗಳು ಮತ್ತು ಮಲಮಗ ಸ್ಥಳದಿಂದ ಓಡಿಹೋಗಿದ್ದು, ನಂತರ ಪೊಲೀಸರು ಬಂಧಿಸಿದ್ದಾರೆ. ಮೃತರನ್ನು ಶಾಂತಿ ಸಿಂಗ್ ಎಂದು ಗುರುತಿಸಲಾಗಿದೆ. ಶಿವಂ ಮತ್ತು ತನ್ನು ಅಕಾ ಪೂಜಾ ಬಂಧಿತ ಆರೋಪಿಗಳು.
ಪೂಜಾ ಶಾಂತಿಯ ಮಗಳಾಗಿದ್ದರೆ, ಶಿವಂ ಅವಳ ಎರಡನೇ ಗಂಡನ ಮಗ. ವರಸೆಯಲ್ಲಿ ಅಣ್ಣ- ತಂಗಿಯರಾದ ಇವರಿಬ್ಬರೂ ಪಲ್ಲಂಗದಲ್ಲಿರುವಾಗ ತಾಯಿ ನೋಡಿದ್ದು, ಇದೇ ಕಾರಣದಿಂದ ತಾಯಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಶಾಂತಿಯ ಮುಖ ಮತ್ತು ಕತ್ತಿನ ಮೇಲೆ ಹಲವು ಬಾರಿ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೊಲೆಯ ನಂತರ ನಾಪತ್ತೆಯಾಗಿದ್ದ ಪೂಜಾಳ ಮೊಬೈಲ್ ಕರೆ ವಿವರಗಳ ಆಧಾರದ ಮೇಲೆ ಶಿವಂನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆತನ ಹೇಳಿಕೆ ಆಧರಿಸಿ ಪೂಜಾಳನ್ನೂ ವಶಕ್ಕೆ ಪಡೆಯಲಾಗಿದೆ.