Ad Widget .

ಕಮಲದತ್ತ ವಾಲಿದ ಸುಮಲತಾ!! ಬಿಜೆಪಿಯಿಂದ ಗ್ರೀನ್ ಸಿಗ್ನಲ್; ನಾಳೆ ಮಹತ್ವದ ಘೋಷಣೆ

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆ ರಣತಂತ್ರ ರೂಪಿಸುತ್ತಿರೋ ಬೆನ್ನಲ್ಲೆ ಸುಮಲತಾ ಅಂಬರೀಷ್‌ ಬಿಜೆಪಿ ಸೇರ್ಪಡೆ ಬಗ್ಗೆ ನಾಳೆ ಮಹತ್ವದ ತೀರ್ಮಾನವಾಗಲಿದೆ ಎಂದು ವರದಿಯಾಗಿದೆ.

Ad Widget . Ad Widget .

ಸುಮಲತಾ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್‌ನಿಂದ ಗ್ರೀನ್‌ ಸಿಗ್ನಲ್ ನೀಡುವ ಬಗ್ಗೆ ನಾಳೆ ಸುಮಲತಾ ನಿವಾಸದಲ್ಲೇ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಸುಮಲತಾ ಅಂಬರೀಷ್‌ ಮಹತ್ವದ ಘೋಷಣೆಯನ್ನು ಮಾಡಲಿದ್ದಾರೆ.

Ad Widget . Ad Widget .

ಸುಮಲತಾ ಅಂಬರೀಷ್‌ ಬಿಜೆಪಿ ಸೇರ್ಪಡೆ ಬಗ್ಗೆ ಆಪ್ತರೊಳಗಡೆ ಒಮ್ಮತ ತೀರ್ಮಾನ ಸಾಧ್ಯತೆಯಿದೆ. ಮಂಡ್ಯದ ಸುಮಲತಾ ತಮ್ಮ ನಿವಾಸದಲ್ಲೇ ಅಧಿಕೃತವಾಗಿ ಬಿಜೆಪಿ ಸೇರುವ ಬಗ್ಗೆ ಘೋಷಣೆ ಮಾಡಲಿದ್ದಾರೆ. ಮಂಡ್ಯ ಹಾಗೂ ಬೆಂಗಳೂರಿನ ಆಪ್ತರ ಜೊತೆ ಸಭೆ ನಡೆಸಿ ಚರ್ಚೆ ನಡೆಸಿ ಈ ನಿರ್ಧಾರ ತೆಗೆದುಕೊಂಡ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

Leave a Comment

Your email address will not be published. Required fields are marked *