Ad Widget .

ಮಾಡಾಳ್ ತಳಿ ಅಡಿಕೆ ಬೆಳೆದು ಕೋಟಿ ಸಂಪಾದಿಸಿ| ಬಿಜೆಪಿ ವಿರುದ್ದ ಜೆಡಿಎಸ್ ಟೀಕಾ ಪ್ರಹಾರ

ಸಮಗ್ರ ನ್ಯೂಸ್: ‘ಅಡಿಕೆ ಬೆಳೆದು ಕೋಟಿ ಕೋಟಿ ಸಂಪಾದನೆ ಮಾಡ್ಬೇಕಾ? ಹಾಗಾದ್ರೆ ಮಾಡಾಳ್ ತಳಿಯ ಅಡಿಕೆ ಗಿಡಗಳನ್ನು ಬೆಳಸಿ ಕೋಟ್ಯಾಂತರ ರೂಪಾಯಿ ಸಂಪಾದಿಸಿ!’ ಹೀಗೆ ವಿಡಂಬನಾತ್ಮಕವಾಗಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಜೆಡಿಎಸ್ ಹರಿ ಹಾಯ್ದಿದೆ.

Ad Widget . Ad Widget .

ಈ ಸಂಬಂಧ ಟ್ವೀಟ್ ಮಾಡಿರುವ ಜೆಡಿಎಸ್, ಲಂಚ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಶಾಸಕನನ್ನು ಬಿಜೆಪಿ ಕಾರ್ಯಕರ್ತರು ‘ಭಾರತ್ ಮಾತಾ ಕಿ ಜೈ’ ಎಂದು ಕೂಗುತ್ತಾ ಅದ್ದೂರಿ ಮೆರವಣಿಗೆ ಮಾಡಿದ್ದಾರೆ. ಭ್ರಷ್ಟರಿಗೆ ಜೈಕಾರ ಹಾಕುವುದೆ ಬಿಜೆಪಿ ಇಂಡಿಯಾ ಹೇಳುವ ದೇಶ ಪ್ರೇಮ. ನಿಮ್ಮ ನಾಚಿಕೆಯಿಲ್ಲದ ನಡೆಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ಜೆಡಿಎಸ್ ಛೀಮಾರಿ ಹಾಕಿದೆ.

Ad Widget . Ad Widget .

ನಾಪತ್ತೆಯಾಗಿದ್ದ ಶಾಸಕ ಜಾಮೀನು ಸಿಗುತ್ತಿದ್ದಂತೆ ಪ್ರತ್ಯಕ್ಷರಾಗಿದ್ದಾರೆ. ಅರಗ ಜ್ಞಾನೇಂದ್ರ ಅವರೇ ನಾಪತ್ತೆಯಾಗಿದ್ದ ವೇಳೆ ಅವರು ಎಲ್ಲಿದ್ದರು ಎಂದು ನಿಮಗೆ ಗೊತ್ತಿರಲಿಲ್ಲವೆ? ಜನರಿಗೆ ಎಷ್ಟು ಮಂಕುಬೂದಿ ಎರಚಬಲ್ಲಿರಿ?ಈ ಬಾರಿ ನಿಮ್ಮೆಲ್ಲರನ್ನೂ ಮನೆಯಲ್ಲಿ ಕೂರುವಂತೆ ಜನತೆ ಮಾಡಲಿದ್ದಾರೆ ನೆನಪಿರಲಿ ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.

ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೆ ನೀವು ಪದೇ ಪದೇ ರಾಜ್ಯಕ್ಕೆ ಬರುತ್ತಿರುವುದು ಮಾಡಾಳು ವಿರೂಪಾಕ್ಷ ಅವರ ಮನೆಯಲ್ಲಿ ಸಿಕ್ಕ ಹಣಕ್ಕಾಗಿ ಎಂದು ಜನರು ಮಾತನಾಡುತ್ತಿದ್ದಾರೆ. ಈ ಬಗ್ಗೆ ಮುಂದಿನ ಬಾರಿ ಬಂದಾಗ ಸ್ಪಷ್ಟೀಕರಣ ನೀಡಿ ಎಂದು ಜೆಡಿಎಸ್ ಒತ್ತಾಯಿಸಿದೆ.

Leave a Comment

Your email address will not be published. Required fields are marked *