Ad Widget .

ಸೆಕ್ಸ್ ವೇಳೆ ಮದ್ಯದ ಜೊತೆ ವಯಾಗ್ರ ಸೇವನೆ|‌ ಸ್ನೇಹಿತೆಯೊಂದಿಗೆ ಸರಸದಲ್ಲಿದ್ದವ ಮಸಣ ಸೇರಿದ!!

ಸಮಗ್ರ ನ್ಯೂಸ್: ಮದ್ಯಪಾನ ಮಾಡುತ್ತ, ವಯಾಗ್ರ ಮಾತ್ರೆಗಳನ್ನು ಸೇವಿಸಿದ 41 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಆಘಾತಕಾರಿ ಪ್ರಕರಣ ಮಹಾರಾಷ್ಟ್ರದ ನಾಗ್ಪುರದಲ್ಲಿ ವರದಿಯಾಗಿದೆ.

Ad Widget . Ad Widget .

ಸೆಕ್ಸ್ ನಲ್ಲಿ ತೊಡಗುವ ಮೊದಲು ಮದ್ಯದೊಂದಿಗೆ 250 ಎಂಜಿಯ ಸಿಲ್ಡೆನಫಿಲ್​ ಮಾತ್ರೆಗಳನ್ನು ತೆಗೆದುಕೊಂಡಿದ್ದಾಗಿ ವೈದ್ಯಕೀಯ ವರದಿಯನ್ನು ಪ್ರಕಟಿಸಲಾಗಿದೆ.

Ad Widget . Ad Widget .

41 ವರ್ಷದ ವ್ಯಕ್ತಿ ತನ್ನ ಸ್ನೇಹಿತೆಯೊಂದಿಗೆ ನಾಗ್ಪುರದ ಹೋಟೆಲ್​ಗೆ ಹೋಗಿ ತಂಗಿದ್ದ. ಆತ ಮದ್ಯಪಾನ ಮಾಡುತ್ತ, 50ಎಂಜಿಯ 2 ಸಿಲ್ಡೆನ್​ಫಿಲ್​ (ವಯಾಗ್ರ ಬ್ರ್ಯಾಂಡ್​) ಮಾತ್ರೆಗಳನ್ನು ನುಂಗಿದ್ದ. ಮರುದಿನ ಬೆಳಗ್ಗೆ ಎದ್ದವನು ಅಸ್ವಸ್ಥನಾಗಿದ್ದ. ಅವನಿಗೆ ವಾಂತಿ ಕೂಡ ಪ್ರಾರಂಭವಾಯಿತು.

ಅದನ್ನು ನೋಡಿ ಹೆದರಿದ ಅವನ ಸ್ನೇಹಿತೆ, ವೈದ್ಯರ ಬಳಿ ಹೋಗೋಣ ಎಂದಳು. ಆದರೆ ಅವನು ಅದನ್ನು ಒಪ್ಪಲಿಲ್ಲ. ಬೇಡ, ನನಗೆ ಈ ಹಿಂದೆಯೂ ಒಮ್ಮೆ ಹೀಗೆ ಆಗಿತ್ತು ಎಂದು ಹೇಳಿದ. ಆದರೆ ಬರುಬರುತ್ತ ಅವನು ತೀವ್ರ ಅಸ್ವಸ್ಥನಾದ. ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಷ್ಟರಲ್ಲಿ ಮೃತಪಟ್ಟಿದ್ದ. ಮೆದುಳಿಗೆ ಆಮ್ಲಜನಕದ ಪೂರೈಕೆಯಾಗದೆ, ಬ್ರೇನ್​ ಹೆಮರೇಜ್​ ಆಗಿ ಆತ ಸಾವನ್ನಪ್ಪಿದ್ದಾಗಿ ವೈದ್ಯರು ಹೇಳಿದ್ದಾರೆ.

ಮೃತದೇಹವನ್ನು ಪೋಸ್ಟ್​ಮಾರ್ಟಮ್​ ಮಾಡಿದಾಗ, ಮಿದುಳಿನಲ್ಲಿ 300 ಗ್ರಾಂಗಳಷ್ಟು ರಕ್ತಹೆಪ್ಪುಗಟ್ಟಿದ್ದು ಪತ್ತೆಯಾಗಿದೆ. ಈ ಮೊದಲೇ ಆತನಿಗೆ ಇದ್ದ ರಕ್ತದೊತ್ತಡ, ಮಾತ್ರೆ ಮತ್ತು ಮದ್ಯದ ಮಿಶ್ರಣದಿಂದಾಗಿಯೇ ಹೀಗಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ವಯಾಗ್ರ ಸೇರಿ, ಯಾವುದೇ ಮಾತ್ರೆಗಳನ್ನು ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳಬಾರದು. ಹೀಗೆ ಮಾತ್ರೆ-ಮದ್ಯದ ಮಿಶ್ರಣ ಸೇವನೆ ಒಳ್ಳೆಯದಲ್ಲ ಎಂದು ವೈದ್ಯಕೀಯ ವರದಿ ತಿಳಿಸಿದೆ.

Leave a Comment

Your email address will not be published. Required fields are marked *