Ad Widget .

ಇನ್ಸ್ಟಾಗ್ರಾಂ ಕ್ರೈಂ ಸ್ಟೋರಿ| ಮತ್ತು ಬರುವ ಪಾನೀಯ ನೀಡಿ ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ| ಓರ್ವ ಆರೋಪಿಯ ಬಂಧನ; ಏಳು ಮಂದಿ ವಿರುದ್ದ ದೂರು ದಾಖಲು

ಸಮಗ್ರ ನ್ಯೂಸ್: ಹುಕ್ಕಾ ಬಾರ್‌ಗೆ ಕರೆದೊಯ್ದು ಪ್ರಜ್ಞೆ ತಪ್ಪುವ ತಂಪು ಪಾನೀಯ ಕುಡಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿ ಕಾನ್ಪುರ ನಿವಾಸಿ ವಿನಯ್ ಠಾಕೂರ್ ಸೇರಿದಂತೆ ಏಳು ಮಂದಿಯ ವಿರುದ್ಧ ಬಾಲಕಿ ತಂದೆ ದೂರು ದಾಖಲಿಸಿದ್ದಾರೆ.

Ad Widget . Ad Widget .

ವೈದ್ಯ ದಂಪತಿಯ ಪುತ್ರಿ 16 ವರ್ಷದ ಬಾಲಕಿ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಆರೋಪಿ ವಿನಯ್ ಠಾಕೂರ್ ನೊಂದಿಗೆ ಸಂಪರ್ಕ ಹೊಂದಿದ್ದಳು. ಈತ ಮಾರ್ಚ್ 4ರಂದು ಕರ್ರಾಹಿಯ ಕೆಫೆಗೆ ಆಕೆಯನ್ನು ಕರೆದೊಯ್ದಿದ್ದಾನೆ. ಅಲ್ಲಿ ಅವರು ಹುಕ್ಕಾ ಸೇದಿದ್ದಾರೆ ಎಂದು ತಂದೆಯ ದೂರಿನಲ್ಲಿ ತಿಳಿಸಿದ್ದಾರೆ.

Ad Widget . Ad Widget .

ಬಳಿಕ ವಿನಯ್ ಬಾಲಕಿಗೆ ತಂಪು ಪಾನೀಯ ನೀಡಿದ್ದಾನೆ. ಅದರಲ್ಲ ಪ್ರಜ್ಞೆ ತಪ್ಪುವ ಔಷಧಿ ಹಾಕಿದ್ದನು. ಬಳಿಕ ಆಕೆಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ದೂರು ದಾಖಲಾಗಿದೆ.

ಅದಲ್ಲದೆ ಬಾಲಕಿಯನ್ನು ಮತ್ತೊಂದು ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದು, ಅಲ್ಲಿ ಇನ್ನೂ ಆರು ಮಂದಿ ಸ್ನೇಹಿತರು ಸೇರಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಬಾಲಕಿ ಪ್ರತಿರೋಧ ವ್ಯಕ್ತಪಡಿಸಿದ್ದು, ಈ ವೇಳೆ ಆರೋಪಿ ಆಕೆಯ ದೇಹದಾದ್ಯಂತ ಕಚ್ಚಿದ್ದಾನೆ.

ಬಾಲಕಿ ಮನೆಗೆ ಬಂದು ಈ ಬಗ್ಗೆ ವಿವರಿಸಿದ ನಂತರ ತಂದೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *