ಸಮಗ್ರ ನ್ಯೂಸ್: ದಕ್ಷಿಣ ಫಿಲಿಪೈನ್ಸ್‌ನಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಭೂಕಂಪವು ಮಂಗಳವಾರ ಸುಮಾರು 2:00ಗಂಟೆಗೆ ಮರಾಗುಸನ್ ಪುರಸಭೆಯಿಂದ ಕೆಲವು ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಮಿಂಡಾನಾವೊ ದ್ವೀಪದ ದವಾವೊ ಡಿ ಓರೊದ ಪರ್ವತ ಪ್ರಾಂತ್ಯದಲ್ಲಿ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತದ ವರದಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಮರಗುಸನ್ ವಿಪತ್ತು ಕಚೇರಿಯ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.
ಇದುವರೆಗೂ ಹಾನಿಯ ಕುರಿತು ವರದಿಗಳು ಬಂದಿಲ್ಲ. ಅದಾಗ್ಯೂ ವಿಪತ್ತು ನಿರ್ವಹಣಾ ಪಡೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ತಿಳಿದುಬಂದಿದೆ.