ಮಾಡಾಳ್ ವಿರೂಪಾಕ್ಷಪ್ಪ ಬೆಂಗ್ಳೂರಲ್ಲೇ ಇದ್ದಾರೆ, ಸರ್ಕಾರವೇ ರಕ್ಷಣೆ ನೀಡ್ತಿದೆ – ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಬಿಜೆಪಿಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬೆಂಗಳೂರಿನಲ್ಲೇ ಇದ್ದಾರೆ, ರಾಜ್ಯ ಸರ್ಕಾರವೇ ಅವರನ್ನು ರಕ್ಷಣೆ ಮಾಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

Ad Widget ... ..

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಗನ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿದ್ದು, ಸರ್ಕಾರ ಇನ್ನೂ ಶಾಸಕರನ್ನು ಬಂಧಿಸಿಲ್ಲ.

Ad Widget

ಸರ್ಕಾರವೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಭದ್ರತೆ ಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ ಬೆಂಗಳೂರಿನಲ್ಲೇ ಇದ್ದಾರೆ, ರಾಜ್ಯ ಬಿಜೆಪಿ ಸರ್ಕಾರವೇ ಭದ್ರತೆ ಕೊಟ್ಟಿದೆ. ಕೂಡಲೇ ವಿರೂಪಾಕ್ಷಪ್ಪರನ್ನು ಬಂಧಿಸಬೇಕು. ಸಿಎಂ ಬೊಮ್ಮಾಯಿಗೆ ನೈತಿಕತೆ ಇದ್ದರೆ ಕೂಡಲೇ ಬಂಧಿಸಬೇಕು. ಇದು 40% ಸರ್ಕಾರ ಎಂದು ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Comment

Your email address will not be published. Required fields are marked *