Ad Widget .

ಸಂಪಾಜೆ: ಅಕ್ರಮ ಮರ ಸಾಗಾಟ| ಲಾರಿ ಮತ್ತು ಮರದ ದಿಮ್ಮಿ ಸಹಿತ ಆರೋಪಿಯ ಬಂಧನ

ಸಮಗ್ರ ನ್ಯೂಸ್: ಕೊಡಗು ಜಿಲ್ಲಾ ಸಂಪಾಜೆ ವಲಯಾರಣ್ಯ ವ್ಯಾಪ್ತಿಯ ಅರಣ್ಯ ತನಿಖಾ ಠಾಣೆ ಸಂಪಾಜೆಯಲ್ಲಿ ಮಡಿಕೇರಿಯಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಹೆಬ್ಬಲಸು ಮರದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ಆರೋಪಿಯನ್ನು ಮಂಗಳೂರು ಅಸೈಗೋಳಿಯ ಮಹಮ್ಮದ್ ಸಪ್ವಾನ್ ಎಂದು ಗುರುತಿಸಲಾಗಿದೆ.

Ad Widget . Ad Widget .

ಆರೋಪಿ ಹಾಗೂ ಮರ ಸಾಗಾಟಕ್ಕೆ ಬಳಸಿದ್ದ ವಾಹನವನ್ನು ಸಂಪಾಜೆ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಒಟ್ಟು 12 ಹೆಬ್ಬಲಸು ಮರದ ದಿಮ್ಮಿಗಳು ಲಭ್ಯವಾಗಿವೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಕೈಗೊಳ್ಳಲಾಗಿದೆ.

Ad Widget . Ad Widget .

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಪೂವಯ್ಯ.ಎ.ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮೊಯಿಷಿನ್ ಬಾಷಾ ಹಾಗೂ ವಲಯ ಅರಣ್ಯಾಧಿಕಾರಿ ಶ್ರೀ ಅನನ್ಯಕುಮಾರ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಬಸವರಾಜಪ್ಪ, ಸಿಬ್ಬಂದಿಗಳಾದ ವಿನಯಕೃಷ್ಣ.ಎಂ.ಸಿ ಉಪ ವಲಯ ಅರಣ್ಯಾಧಿಕಾರಿ, ಗಸ್ತು ಅರಣ್ಯಪಾಲಕರಾದ ಶ್ರೀ ನಾಗರಾಜ್.ಎಸ್, ಕಾರ್ತಿಕ್ ಡಿ., ವಾಹನ ಚಾಲಕರಾದ ಶಿವಪ್ರಸಾದ್, ಮನೋಜ್‌ ಹಾಗೂ ಇತರೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *