Ad Widget .

ಕುಸಿದ ಈರುಳ್ಳಿ ಬೆಲೆ| ಪ್ರಧಾನಿ‌ ನಿವಾಸಕ್ಕೆ ಪಾರ್ಸಲ್ ಕಳುಹಿಸಿದ ರೈತರು!!

ಸಮಗ್ರ ನ್ಯೂಸ್: ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ಮಹಾರಾಷ್ಟ್ರದ ಅಹಮದ್‌ನಗರದ ರೈತರ ಗುಂಪೊಂದು ಪ್ರತಿಭಟನೆ ಸೂಚಕವಾಗಿ ‍ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂಚೆ ಮೂಲಕ ಸೋಮವಾರ ಈರುಳ್ಳಿಯನ್ನು ‘ಪಾರ್ಸೆಲ್‌’ ಕಳುಹಿಸಿದೆ.

Ad Widget . Ad Widget .

‘ಬೆಲೆ ಇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ತಮಗೆ ಅಗತ್ಯ ಪರಿಹಾರ ಒದಗಿಸಬೇಕು. ಈರುಳ್ಳಿ ಹಾಗೂ ಇತರೆ ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸಬೇಕು. ಪ್ರತಿ ಕ್ವಿಂಟಲ್‌ಗೆ ₹1 ಸಾವಿರ ಪರಿಹಾರ ಪ್ರಕಟಿಸಬೇಕು’ ಎಂದು ಶೇತ್ಕಾರಿ ಸಂಘಟನೆ ಹಾಗೂ ಶೇತ್ಕಾರಿ ವಿಕಾಸ್‌ ಮಂಡಳ ಒತ್ತಾಯಿಸಿವೆ.

Ad Widget . Ad Widget .

‘ಕೇಂದ್ರ ಸರ್ಕಾರ ಕೂಡಲೇ ಈರುಳ್ಳಿ ಸೇರಿದಂತೆ ಇತರ ಕೃಷಿ ಉತ್ಪನ್ನಗಳ ಮೇಲಿನ ನಿರ್ಬಂಧ ತೆರವುಗೊಳಿಸಬೇಕು. ಇದು ರೈತರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶಿಸಲು ಅನುಕೂಲ ಮಾಡಿಕೊಡುತ್ತದೆ. ಅಲ್ಲದೆ, ಕ್ವಿಂಟಲ್‌ಗೆ ತಲಾ ₹1,000 ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

Leave a Comment

Your email address will not be published. Required fields are marked *